KGF, Kolar : ಮೇಕೆದಾಟು (Mekedatu) ಪಾದಯಾತ್ರೆಯ ಬಂದೋಬಸ್ತ್‌ಗೆ ಜಿಲ್ಲೆಯಿಂದ ತೆರಳಿದ್ದ ಆರು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ 25 Police ಸಿಬ್ಬಂದಿಗೆ Covid ಸೋಂಕು ದೃಢಪಟ್ಟಿದೆ. KGF ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು ಬೇರೆ ಕಡೆ ಪರೀಕ್ಷೆ ಮಾಡಿಸಿಕೊಂಡವರ ವರದಿ ಇನ್ನೂ ಬರಬೇಕಾಗಿದೆ.
ಪಾದಯಾತ್ರೆಯ ಬಂದೋ ಬಸ್ತ್‌ಗೆ ಇಲ್ಲಿಂದ ಎರಡು ಬಸ್‌ನಲ್ಲಿ ಪೊಲೀಸರನ್ನು ಕಳುಹಿಸಲಾಗಿತ್ತು. ಎರಡು ದಿನ ಮಠದಲ್ಲಿ, ಮತ್ತೊಂದು ದಿನ ಹಾರೋಹಳ್ಳಿಯ ಚರ್ಚ್‌ನಲ್ಲಿ ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಠದಲ್ಲಿ ಜನರ ಜೊತೆಯಲ್ಲಿ, ಮತ್ತೊಂದು ಕಡೆ ಮಕ್ಕಳ ಜೊತೆ ಪೊಲೀಸರು ಊಟ ಮಾಡಿದ್ದಾರೆ. ಸೋಂಕು ಹರಡುತ್ತಿದ್ದಂತೆಯೇ ಎಚ್ಚೆತ್ತು ಕೊಂಡ ಪೊಲೀಸ್ ಅಧಿಕಾರಿಗಳು ರಾಮನಗರಕ್ಕೆ ಹೋಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಯೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.