back to top
20.5 C
Bengaluru
Friday, December 27, 2024
HomeSportsCricketSouth Africa ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಸೋತ India

South Africa ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಸೋತ India

- Advertisement -
- Advertisement -

Paarl, South Africa : Boland Park ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ KL Rahul ನೇತೃತ್ವದ ಭಾರತ ತಂಡದ ವಿರುದ್ಧ ಸೌತ್ ಆಫ್ರಿಕಾ ೩೧ ರನ್ ಗಳ ಜಯ ಸಾಧಿಸಿದೆ. ಬ್ಯಾಟ್ಸಮನ್ ಗಳಿಗೆ ನೆರವಾಗಿದ್ದ ಪಿಚ್ ನಲ್ಲಿ ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ನಾಯಕ Temba Bavuma ಬ್ಯಾಟಿಂಗ್ ಆಯ್ಕೆ ಮಾಡಿದರು.

ಆರಂಭದಲ್ಲಿ ಕೊಂಚ ಎಡವಿದ ಆಫ್ರಿಕನ್ನರು ನಾಯಕ Temba Bavuma (110) ಮತ್ತು Rassie van der Dussen (129*) ಇಬ್ಬರ ಅಮೋಘ ಶತಕಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಬವುಮಾ ಮತ್ತು ಡಸೆನ್‌ ಭಾರತದ ವಿರುದ್ಧ ನಾಲ್ಕನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟವಾಡುವ ಮೂಲಕ ದಾಖಲೆ ನಿರ್ಮಿಸಿದರು. ಭಾರತದ ವೇಗಿ Jasprit Bumrah 2 ವಿಕೆಟ್ ಪಡೆದರು.

297 ರನ್ ಬೆನ್ನತ್ತಿದ ಭಾರತ 46 ರನ್ ಗಳಿಸಿದ್ದಾಗ 17 ರನ್ ಗಳಿಸಿದ Captain Rahul ವಿಕೆಟ್ ಕಳೆದುಕೊಂಡಿತು. ನಂತರ Shikhar Dhawan ಜೊತೆಯಾದ Virat Kohli ಎರಡನೇ ವಿಕೆಟ್ ಗೆ 96 ರನ್ ಗಳ ಜೊತೆಯಾಟವಾಡಿದರು. ತಳ ಅರ್ಧ ಶತಕಗಳಿಸಿದ Dhawan (79) ಹಾಗೂ Kohli (51) ಯ ಜೊತೆಯಾಟ ಮುರಿದ ನಂತರ ಸತತವಾಗಿ ವಿಕೆಟ್‌ಗಳು ಉರುಳಿದವು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ Shardul Thakur (50) ಅರ್ಧಶತಕ ಗಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಅಂತಿಮವಾಗಿ ಭಾರತ ನಿಗಧಿತ 50 ಓವರ್ ಗಲ್ಲಲಿ 8 ವಿಕೆಟ್ ನಷ್ಟಕ್ಕೆ 265 ಗಳಿಸಿತು. ಸೌತ್ ಆಫ್ರಿಕಾ ಪರ Lungi Ngidi, Tabraiz Shamsi, Andile Phehlukwayo ತಲಾ 2 ವಿಕೆಟ್ ಪಡೆದು ಮಿಂಚಿದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ Rassie van der Dussen ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


Image : ICC

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page