Home Karnataka Ramanagara ಕಬ್ಬಾಳಮ್ಮ ದೇವಾಲಯದ ಹುಂಡಿ ಎಣಿಕೆ

ಕಬ್ಬಾಳಮ್ಮ ದೇವಾಲಯದ ಹುಂಡಿ ಎಣಿಕೆ

1701
Kanakapura Kabbalamma Temple

Kanakapura, Ramanagara : ಕನಕಪುರದ ಐತಿಹಾಸಿಕ ಪ್ರಸಿದ್ಧ ಕಬ್ಬಾಳಮ್ಮ ದೇವಾಲಯದ (Kabbalamma Temple) ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಭಕ್ತರಿಂದ ಹುಂಡಿಯಲ್ಲಿ ₹ 42,67,649 ಸಂಗ್ರಹವಾಗಿದ್ದು ಹಣವನ್ನು ಯೂನಿಯನ್‌ ಬ್ಯಾಂಕ್‌ನಲ್ಲಿ ದೇವಾಲಯದ ಹೆಸರಿನಲ್ಲಿರುವ ಖಾತೆಗೆ ಜಮಾ ಮಾಡಲಾಗಿದೆ ಎಂದು ಅಧಿಕಾರಿ ಲಕ್ಷ್ಮೀನಾರಾಯಣ ತಿಳಿಸಿದರು.

ರೆವಿನ್ಯೂ ಇನ್‌ಸ್ಪೆಕ್ಟರ್‌ ಬಸವರಾಜು, ಚನ್ನೇಗೌಡ, ಗ್ರಾಮ ಲೆಕ್ಕಿಗರಾದ ಮಹೇಶ್, ಶಿವಲಿಂಗಯ್ಯ, ಈಶ್ವರ ರಾವ್, ಅಶೋಕ್ ರಾಥೋಡ್, ಮೀನಾಕ್ಷಿ, ಮಂಜುನಾಥ್, ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page