Home Karnataka Bengaluru Rural ಆನೇಕಲ್‌ನ ಮಾರಮ್ಮ ದೇವಿ ದೇಗುಲದ ವಾರ್ಷಿಕೋತ್ಸವ

ಆನೇಕಲ್‌ನ ಮಾರಮ್ಮ ದೇವಿ ದೇಗುಲದ ವಾರ್ಷಿಕೋತ್ಸವ

452
Anekal Maramma Devi Temple

Anekal, Bengaluru Rural : ಆನೇಕಲ್ ತಾಲ್ಲೂಕಿನ ಗೆರಟಿಗನಬೆಲೆ ಗ್ರಾಮ ದೇವತೆ ಮಾರಮ್ಮ ದೇವಿ ದೇವಾಲಯದ (Maramma Devi Temple) ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಟ್ರಸ್ಟ್‌ ವತಿಯಿಂದ ವಿಜೃಂಭಣೆಯಿಂದ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ದೇವಿಗೆ 108 ಕಲಶ ಪೂಜೆ, ಅಭಿಷೇಕ, ವಿಶೇಷ ಅಲಂಕಾರ ಏರ್ಪಡಿಸಿ ಹೋಮ ಆಯೋಜಿಸಲಾಗಿತ್ತು. ಮಹಿಳೆಯರು ಮಡಿಲಕ್ಕಿ ನೀಡಿ ದೇವಿಗೆ ಬೆಲ್ಲದಾರತಿ ಮಾಡಿ ಭಕ್ತಿ ಸಲ್ಲಿಸಿದರು.

ರಕ್ತದಾನ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿತ್ತು. ಭಾನುವಾರ ರಾತ್ರಿ ಶ್ರೀನಿವಾಸಾಚಾರಿ ನಾಟಕ ನಿರ್ದೇಶನದಲ್ಲಿ ಗ್ರಾಮದ ಯುವಕರು ಅಭಿನಯಿಸಿದ ‘ಸಾಮ್ರಾಟ್‌ ಸುಯೋಧನ’ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಯಿತು.

NO COMMENTS

LEAVE A REPLY

Please enter your comment!
Please enter your name here

You cannot copy content of this page