back to top
25.4 C
Bengaluru
Tuesday, February 4, 2025
HomeHealthಚಿಕ್ಕ ವಯಸ್ಸಿನಲ್ಲಿಯೇ Joint pain ಸಮಸ್ಯೆ

ಚಿಕ್ಕ ವಯಸ್ಸಿನಲ್ಲಿಯೇ Joint pain ಸಮಸ್ಯೆ

- Advertisement -
- Advertisement -

ವಯಸ್ಸು ಹೆಚ್ಚಾಗುತ್ತಿದ್ದಂತೆ ಕೀಲು ನೋವಿನ (Joint pain) ಸಮಸ್ಯೆ ಕಂಡುಬರುವುದು ಸಾಮಾನ್ಯ. ಹವಾಮಾನ ತುಂಬಾ ತಂಪಾಗಿರುವಾಗ, ಕೀಲುಗಳು ಮತ್ತು ಸ್ನಾಯುಗಳಲ್ಲಿ (muscles) ನೋವು ಉಂಟಾಗಬಹುದು.

ಇದಲ್ಲದೆ, ಕೀಲು ನೋವಿಗೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಮೂಳೆ ದುರ್ಬಲಗೊಳ್ಳುವುದು, ಹೆಚ್ಚಿದ ಯೂರಿಕ್ ಆಮ್ಲ, ಸಂಧಿವಾತ, (arthritis) ಗಾಯ ಇತ್ಯಾದಿಗಳು ಸೇರಿವೆ.

ಇತ್ತೀಚಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಒಂದು ನಿರ್ದಿಷ್ಟ ವಯಸ್ಸಿನ ನಂತರ ಕಂಡು ಬರುತ್ತದೆ, ಜೊತೆಗೆ ಕೀಲು ನೋವಿನ ಸಮಸ್ಯೆಯೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಕಂಡು ಬರುತ್ತಿದೆ.

ಕಾರಣಗಳು

  • ಆಹಾರದ ನಿರ್ಲಕ್ಷ್ಯ: ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ದೇಹದಲ್ಲಿ ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪೋಷಕಾಂಶಗಳಾಗಿವೆ. ಇದನ್ನು ಒದಗಿಸುವ ಆಹಾರವನ್ನು ನೀವು ಸೇವನೆ. ಮೊಟ್ಟೆಗಳು, ಒಣಗಿದ ಮೀನು, ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಧಾನ್ಯಗಳು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು
  • ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು: ನೀವು ಒಂದೇ ಭಂಗಿಯಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿದರೆ ಅಥವಾ ಫೋನ್ ಬಳಸಿದರೆ ಅಥವಾ ಟಿವಿ ನೋಡುತ್ತಿದ್ದರೆ, ಭುಜದ ಕೀಲುಗಳು, ಮೊಣಕಾಲುಗಳು, ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳಲ್ಲಿ ನೋವು ಉಂಟಾಗಬಹುದು. ಹಾಗಾಗಿ ಒಬ್ಬ ವ್ಯಕ್ತಿ ಕನಿಷ್ಠ ಪ್ರತಿ 40 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಬೇಕು ಮತ್ತು ಲಘು ಸ್ಟ್ರೆಚಿಂಗ್ ಅಥವಾ ನಡಿಗೆ ಮಾಡಬೇಕು.
  • ಹೆಚ್ಚುವರಿ ತೂಕ: ತೂಕ ಹೆಚ್ಚಾಗುತ್ತಿದ್ದರೆ ಸಮಯಕ್ಕೆ ಗಮನ ಹರಿಸಿ. ಬೊಜ್ಜು ಮಧುಮೇಹ, ಹೃದ್ರೋಗ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುವುದಲ್ಲದೆ, ಕೀಲುಗಳ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ.
  • ವ್ಯಾಯಾಮ ಮಾಡದಿರುವುದು: ಯೋಗ, ಜಾಗಿಂಗ್, ಸೈಕ್ಲಿಂಗ್, ಲೈಟ್ ಸ್ಟ್ರೆಚಿಂಗ್ ಮುಂತಾದ ಯಾವುದಾದರೂ ದೈಹಿಕ ಚಟುವಟಿಕೆಯನ್ನು ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಏಕೆಂದರೆ ಆಧುನಿಕ ಜೀವನಶೈಲಿಯಲ್ಲಿ, ಆಹಾರ ಪದ್ಧತಿಯು ಸರಿಯಾಗಿ ಇರುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ದೇಹಕ್ಕೆ ತಕ್ಕಂತೆ ಚಲನೆ ಇರುವುದಿಲ್ಲ. ಇದರಿಂದ ಕೀಲು ನೋವು ಮತ್ತು ಸ್ನಾಯು ಬಿಗಿತದಂತಹ ಸಮಸ್ಯೆಗಳು ಬರಬಹುದು.
  • ಅನಾರೋಗ್ಯಕರ ಆಹಾರಗಳು: ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ ಬಳಿಕ ಈ ರೋಗಲಕ್ಷಣಗಳು ಸಂಧಿವಾತವಾಗಿ ಬದಲಾಗಬಹುದು.

ಈ ಕಾರಣದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವಿನ ಸಮಸ್ಯೆಯನ್ನು ಬರಬಹುದು. ಹಾಗಾಗಿ ಆಹಾರ ಸೇವನೆ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page