ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ (US President Donald Trump) ಅವರ ಭದ್ರತೆಯನ್ನು ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಕಳವಳ ವ್ಯಕ್ತಪಡಿಸಿದ್ದಾರೆ. “ಟ್ರಂಪ್ ಸುರಕ್ಷಿತವಾಗಿಲ್ಲ” ಎಂದು ಅವರು ಹೇಳಿದರು. ಪುಟಿನ್, ಟ್ರಂಪ್ ಅವರನ್ನು ಅನುಭವಿ ಮತ್ತು ಬುದ್ಧಿವಂತ ರಾಜಕಾರಣಿ ಎಂದು ಹೊಗಳಿದರು.
ಜುಲೈನಲ್ಲಿ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರನ್ನು ಹತ್ಯೆ ಮಾಡುವ ಯತ್ನ ನಡೆದಿತ್ತು, ಮತ್ತು ಸೆಪ್ಟೆಂಬರ್‌ನಲ್ಲಿ ಅವರ ಫ್ಲೋರಿಡಾ ಗಾಲ್ಫ್ ಕೋರ್ಸ್‌ನಲ್ಲಿ ಗುಂಡು ಹಾರಿಸಲಾಯಿತು. ಈ ಘಟನೆಗಳನ್ನು ಉಲ್ಲೇಖಿಸಿದ ಪುಟಿನ್, ಟ್ರಂಪ್ ಇನ್ನೂ ಸಂಪೂರ್ಣ ಸುರಕ್ಷಿತನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಟ್ರಂಪ್ ಅವರ ಕುಟುಂಬ ಮತ್ತು ಮಕ್ಕಳ ಮೇಲೆ ನಡೆದ ಟೀಕೆಗೆ ಪುಟಿನ್ ಅಸಮಾಧಾನ ವ್ಯಕ್ತಪಡಿಸಿದರು. “ರಷ್ಯಾದಲ್ಲಿ ಅಂತಹ ನಡವಳಿಕೆ ಎಂದಿಗೂ ನಡೆಯುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ನವೆಂಬರ್ 7 ರಂದು, ಟ್ರಂಪ್ ಮತ್ತು ಪುಟಿನ್ ಉಕ್ರೇನ್ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದರು. ಸಂಘರ್ಷವನ್ನು ತೀವ್ರಗೊಳಿಸದಂತೆ ನೋಡಿಕೊಳ್ಳಲು ಟ್ರಂಪ್ ಒತ್ತಾಯಿಸಿದರು.
ಯುಎಸ್-ರಷ್ಯಾ ಸಂಬಂಧ ಸುಧಾರಿಸುವ ಪ್ರಕ್ರಿಯೆಗೆ ಆಸಕ್ತಿ ತೋರಿದ ಪುಟಿನ್, ಈ ಸಂಬಂಧಗಳು ಉಭಯ ದೇಶಗಳ ಹಿತಾಸಕ್ತಿಗೆ ಕಾರಣವಾಗಬೇಕು ಎಂದು ಹೇಳಿದ್ದಾರೆ.