back to top
22.3 C
Bengaluru
Monday, December 23, 2024
HomeTechnologyGadgetsApple ನ ಮೊದಲ Foldable iPad ಬಿಡುಗಡೆಗೆ ಚಿಂತನೆ!

Apple ನ ಮೊದಲ Foldable iPad ಬಿಡುಗಡೆಗೆ ಚಿಂತನೆ!

- Advertisement -
- Advertisement -

Apple ನ ಹೊಸ ಐಪ್ಯಾಡ್ ಪ್ರೊ M4 13-ಇಂಚಿನ (iPad Pro M4) ದೊಡ್ಡ ಡಿಸ್ಪ್ಲೇಯೊಂದಿಗೆ ಬರುತ್ತಿದೆ. ಇತ್ತೀಚೆಗೆ ವರದಿಯ ಪ್ರಕಾರ, ಆಪಲ್ ನ ಮೊದಲ ಫೋಲ್ಡಬಲ್ ಐಪ್ಯಾಡ್ (Foldable iPad) 18.8 ಇಂಚಿನ ಟಚ್ ಡಿಸ್ಪ್ಲೇಯೊಂದಿಗೆ ತೆರೆದಾಗ ದೊಡ್ಡದು ಕಾಣುತ್ತದೆ, ಇದು ಮ್ಯಾಕ್ಬುಕ್ ಪ್ರೊಗಿಂತಲೂ ದೊಡ್ಡದು.

ಈ ಐಪ್ಯಾಡ್ – ಆಪಲ್‌ನ ಮೊದಲ ಫೋಲ್ಡಬಲ್ ಐಪ್ಯಾಡ್ ಆಗಿದೆ. ಎರಡು ಐಪ್ಯಾಡ್‌ಗಳನ್ನು ಪಕ್ಕಪಕ್ಕದಲ್ಲಿ ಇರಿಸಿದಷ್ಟು ದೊಡ್ಡದಾಗಿರುತ್ತದೆ ಎಂದು ವರದಿ ಹೇಳುತ್ತದ, ಮತ್ತು ಹೊಸ ಸ್ಕ್ರೀನ್ ಟೆಕ್ನಾಲಜಿ ಕ್ರೀಸ್ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಹೇಳಲಾಗಿದೆ. ಐಫೋನ್‌ನ ಫ್ಲಿಪ್-ಸ್ಟೈಲ್ ರೂಪದಲ್ಲಿ ಈಗಾಗಲೇ ಕೆಲಸ ನಡೆಯುತ್ತಿದೆ, ಆದರೆ ಇದು 2026 ರವರೆಗೆ ಮಾರುಕಟ್ಟೆಗೆ ಬರುವುದಾಗಿ ಶಂಕಿಸಲಾಗಿದೆ.

ಈ ಐಪ್ಯಾಡ್ 2026 ಅಥವಾ 2027 ರಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ, ಮತ್ತು ಇದು iPadOS ಮತ್ತು macOS ಎರಡರಲ್ಲಿಯೂ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ macOS ಅಪ್ಲಿಕೇಶನ್ ಗಳನ್ನು ಸಹ ಚಲಾಯಿಸಬಹುದಾದ ಅಭಿಪ್ರಾಯ ಇದೆ.

ಇದರಲ್ಲಿ OLED ಪರದೆ, M ಸರಣಿಯ ಚಿಪ್, 16GB RAM, ಮತ್ತು 256GB ಆಂತರಿಕ ಸಂಗ್ರಹಣೆಯು ಇರುತ್ತದೆ. 13-ಇಂಚಿನ ಐಪ್ಯಾಡ್ ಪ್ರೊ ರೂ. 99,900 ರಿಂದ ಪ್ರಾರಂಭವಾಗುತ್ತದೆ ಎಂದು ಪರಿಗಣಿಸಿದರೆ, ಫೋಲ್ಡಬಲ್ ಐಪ್ಯಾಡ್ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಬಹುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page