ಹೈದರಾಬಾದ್ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣವು ಸೆನ್ಸೇಷನ್ ಸೃಷ್ಟಿಸಿದೆ. ಅಲ್ಲು ಅರ್ಜುನ್ (Allu Arjun) ಅವರು ‘ಪುಷ್ಪ 2’ ಸಿನಿಮಾ ವೀಕ್ಷಿಸಲು ತೆರಳಿದ ಸಂದರ್ಭದಲ್ಲೇ ಈ ಘಟನೆ ನಡೆದಿದೆ, ಅದರಿಂದ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ 9Andhra Pradesh Deputy Chief Minister Pawan Kalyan) ಪ್ರತಿಕ್ರಿಯೆ ನೀಡಿದ್ದಾರೆ.
ಪವನ್ ಕಲ್ಯಾಣ್ ಅವರು, “ಘಟನೆಯ ಹಿಂದಿನ ಸಂಪೂರ್ಣ ಮಾಹಿತಿ ನನಗೆ ತಿಳಿದಿಲ್ಲ. ಕಾನೂನು ಎಲ್ಲರಿಗೂ ಒಂದೇ, ನಾನು ಪೊಲೀಸರ ಮೇಲೆ ದೂರು ನೀಡುವುದಿಲ್ಲ. ಅವರು ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. ಅಲ್ಲು ಅರ್ಜುನ್‌ಗೆ ಥಿಯೇಟರ್ ಸಿಬ್ಬಂದಿಯವರು ಪರಿಸ್ಥಿತಿಯ ಬಗ್ಗೆ ಮೊದಲು ತಿಳಿಸಬೇಕಾಗಿತ್ತು” ಎಂದು ಹೇಳಿದ್ದಾರೆ.
ಅವರು, “ಅಲ್ಲು ಅರ್ಜುನ್ ಕಡೆಯವರು ಸಂತ್ರಸ್ತ ಕುಟುಂಬವನ್ನು ಶೀಘ್ರದಲ್ಲೇ ಭೇಟಿ ಮಾಡಿದರೆ ಉತ್ತಮ. ರೇವತಿ ಸಾವು ನನಗೆ ಶಾಕ್ ಎನಿಸಿದೆ. ಈ ಸಂದರ್ಭದಲ್ಲಿ ಮಾನವೀಯತೆಯ ಕೊರತೆ ಕಾಣಿಸಿತು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪವನ್ ಕಲ್ಯಾಣ್ ಅವರು, ” ಸಿನಿಮಾ ಎಂಬುದು ಎಲ್ಲರೂ ಸೇರಿ ಮಾಡುವ ಪ್ರಯತ್ನ. ಅಲ್ಲು ಅರ್ಜುನ್ ಅವರನ್ನು ಮಾತ್ರ ಅಪರಾಧಿಯನ್ನಾಗಿ ಮಾಡುವುದು ಸರಿಯಲ್ಲ. ಈ ಘಟನೆಯಿಂದ ನನಗೆ ತುಂಬಾ ನೋವುಂಟಾಗಿತ್ತು” ಎಂದು ಹೇಳಿದರು.
“ಚಿರಂಜೀವಿ ಕೂಡ ಕೆಲವೊಮ್ಮೆ ಅಭಿಮಾನಿಗಳನ್ನು ಭೇಟಿ ಮಾಡಲು ಥಿಯೇಟರ್ಗೆ ಹೋಗುತ್ತಿದ್ದರು, ಆದರೆ ಅಭಿಮಾನಿಗಳ ಕಣ್ತಪ್ಪಿಸಲು ಅವರು ವೇಷ ಬದಲಾಯಿಸಿದ್ದರು. ಈಗಿನ ಘಟನೆಗಳಿಂದ ಚಿತ್ರೋದ್ಯಮ ಕಲಿಯಬೇಕು” ಎಂದು ಅವರು ಅಭಿಪ್ರಾಯಪಟ್ಟರು.