ಉತ್ತರಾಖಂಡದಲ್ಲಿ, (Uttarakhand) ತಾನು ಕೇಂದ್ರ ಗೃಹ ಸಚಿವ ಅಮಿತ್ ಶಾರ (Home Minister Amit Shah) ಪುತ್ರ ಜೈ ಶಾ ಎಂದು ಹೇಳಿಕೊಂಡು, BJP ಶಾಸಕ ಆದೇಶ್ ಚೌಹಾಣ್ ಅವರನ್ನು ವಂಚಿಸಲು ಯತ್ನಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಶಾಸಕರನ್ನು ಬೆದರಿಸಿ 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ.
ಶಾಸಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಶಾಸಕರ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಮಿಶ್ ಕುಮಾರ್, ಅಪರಿಚಿತ ಸಂಖ್ಯೆಯಿಂದ ಕರೆ ಬಂದಿರುವ ಬಗ್ಗೆ ದೂರು ನೀಡಿದ್ದರು.
ಕರೆ ಮಾಡಿದ ವ್ಯಕ್ತಿ, ತನ್ನನ್ನು ಜೈ ಶಾ ಎಂದು ಪರಿಚಯಿಸಿಕೊಂಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಪರ್ಕವಿದೆ ಎಂದು ಹೇಳಿದ್ದ. ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ಮಾನಹಾನಿ ಮಾಡುವುದಾಗಿ ಬೆದರಿಸಿದ್ದ.
ಬಂಧಿತ ಗೌರವ್ ನಾಥ್ ಹಿಂದೆ ಸಹ ವಂಚನೆಯ ಪ್ರಕರಣದಲ್ಲಿ ಭಾಗಿಯಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಪ್ರಿಯಾಂಶು ಮತ್ತು ಉವೇಶ್ ಅವರೊಂದಿಗೆ ಹೊಸ ವಂಚನೆ ಯೋಜಿಸಿದ್ದರು.
ಪ್ರಕರಣ ಬೆಳಕಿಗೆ ಬಂದ ತಕ್ಷಣ, ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸಲಾಯಿತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.