Bengaluru: ಗೂಗಲ್ ತನ್ನ ಅತಿದೊಡ್ಡ ಭಾರತೀಯ ಕಚೇರಿಯನ್ನು ಬೆಂಗಳೂರಿನ ಮಹಾದೇವಪುರದಲ್ಲಿ ಉದ್ಘಾಟಿಸಿದೆ. 1.6 ಮಿಲಿಯನ್ ಚದರ ಅಡಿಗಳ ವಿಶಾಲ ಕ್ಯಾಂಪಸ್ ಆಗಿರುವ ಗೂಗಲ್ ಅನಂತ, (Google Anantha) ಜಾಗತಿಕ ಮಟ್ಟದಲ್ಲೂ ಪ್ರಮುಖ ಗೂಗಲ್ ಕಚೇರಿಗಳ ಪೈಕಿ ಒಂದಾಗಿದೆ.
ಗೂಗಲ್ ಬ್ಲಾಗ್ ಪ್ರಕಾರ, ಈ ಹೊಸ ಕಚೇರಿ ಭಾರತದೊಂದಿಗೆ ಕಂಪನಿಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಎರಡು ದಶಕಗಳಿಂದ AI ಆಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಗೂಗಲ್, ಪ್ರವಾಹ ಮುನ್ಸೂಚನೆ, ಕ್ಷಯರೋಗ ಪತ್ತೆ ಮತ್ತು ಆರ್ಥಿಕ ಸೇವೆಗಳಿಗೆ ಸಹಾಯ ಮಾಡುತ್ತಿದೆ.
ಈ ಕ್ಯಾಂಪಸ್‌ಗೆ ‘ಅನಂತ’ ಎಂಬ ಹೆಸರನ್ನು ಇಡಲಾಗಿದೆ, ಅದು ಸಂಸ್ಕೃತದಲ್ಲಿ ಅಪರಿಮಿತ ಎಂಬ ಅರ್ಥವನ್ನು ಹೊಂದಿದೆ. ಬೆಂಗಳೂರು, ತಂತ್ರಜ್ಞಾನ ಕೇಂದ್ರವಾಗಿರುವ ಕಾರಣ, ಇಲ್ಲಿನ ಹೊಸ ಕಚೇರಿ ಗೂಗಲ್ ಇಂಡಿಯಾ ತಂಡ ಮತ್ತು ಸ್ಥಳೀಯ ವಿನ್ಯಾಸತಜ್ಞರ ಸಹಯೋಗದ ಫಲಿತಾಂಶವಾಗಿದೆ.
ಪರಿಸರ ಸ್ನೇಹಿ ತಂತ್ರಜ್ಞಾನ
- 100% ತ್ಯಾಜ್ಯ ನೀರಿನ ಮರುಬಳಕೆ ವ್ಯವಸ್ಥೆ.
- ಮಳೆನೀರು ಸಂಗ್ರಹಣಾ ವ್ಯವಸ್ಥೆ ಸಹ ಹೊಂದಿದೆ.
- ಭಾರತದ ಅತಿದೊಡ್ಡ ಸ್ಮಾರ್ಟ್ ಗ್ಲಾಸ್ ಬಳಕೆ, ಬೆಳಕಿನ ನಿಯಂತ್ರಣ ಹಾಗೂ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು.
- ಆಧುನಿಕ ಶಿಲ್ಪಕಲೆ ಹಾಗೂ ಪ್ರಕೃತಿ ಬೆಳಕಿನ ಅನುಕೂಲತೆ.
ಉದ್ಯೋಗ ಮತ್ತು ಸೌಲಭ್ಯಗಳು
- 16 ಲಕ್ಷ ಚದರ ಅಡಿಗಳಲ್ಲಿ 11 ಅಂತಸ್ತುಗಳ ಕಟ್ಟಡ.
- 5,000 ಕ್ಕೂ ಹೆಚ್ಚು ಉದ್ಯೋಗಿಗಳ ಕೆಲಸದ ಅವಕಾಶ.
- ಚೈಲ್ಡ್ ಕೇರ್ ಕೇಂದ್ರ, ಜಿಮ್, ಆಟದ ಮೈದಾನಗಳು ಮತ್ತು ಕ್ರೀಡಾ ಸೌಲಭ್ಯಗಳು.
- Android, AI, ಗೂಗಲ್ ಪೇ, ಕ್ಲೌಡ್, ಮ್ಯಾಪ್ಸ್, ಸರ್ಚ್ ಮುಂತಾದ ವಿವಿಧ ವಿಭಾಗಗಳಿಗೆ ಇದು ಕೇಂದ್ರವಾಗಲಿದೆ.
ಭಾರತದಲ್ಲಿ ಗೂಗಲ್ ವಿಸ್ತರಣೆ
- ಗೂಗಲ್ ಭಾರತದಲ್ಲಿ ಗುರಗಾಂವ್, ಹೈದರಾಬಾದ್, ಮುಂಬೈ, ಪುಣೆ ಸೇರಿ ಹಲವಾರು ಕಚೇರಿಗಳನ್ನು ಹೊಂದಿದ್ದು, 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
- ಕಂಪನಿ AI, ಕೃಷಿ, ಆರೋಗ್ಯ ಮತ್ತು ಸ್ಥಳೀಯ startupsಗಳಿಗೆ ಸಹಕಾರ ನೀಡುತ್ತಿದೆ.
ನೂತನ ಗೂಗಲ್ ಅನಂತ ಕಚೇರಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸದೊಂದು ಅಗ್ಗಳಿಕೆ ನಿರ್ಮಿಸಲು ಸಜ್ಜಾಗಿದೆ!