Shivamogga: ತುಂಗಭದ್ರಾ (Tungabhadra) ಜಲಾಶಯದ (Linganamakki) ಕ್ರಸ್ಟ್ ಗೇಟ್ ತೊಂದರೆ, ಸರಕಾರಕ್ಕೆ ತಲೆನೋವಾಗಿ, ಈಗ ರಾಜ್ಯದ ಮತ್ತೊಂದು ಪ್ರಮುಖ ಜಲಾಶಯ ಅಪಾಯದ ಸಂಕೇತ ನೀಡುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿ ಇರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಸೋರಿಕೆ ಕಂಡುಬಂದಿದೆ.
ಲಿಂಗನಮಕ್ಕಿ ಜಲಾಶಯವು ರಾಜ್ಯದ ವಿದ್ಯುತ್ ಉತ್ಪಾದನೆಗೆ ಶೇ. 25-28ರಷ್ಟು ಕೊಡುಗೆ ನೀಡುತ್ತದೆ. ಹೀಗಾಗಿ, ಇದರ ನೀರು ಸೋರಿಕೆ ಕಳವಳಕಾರಿಯಾಗಿದೆ. ಕೆಪಿಸಿಎಲ್ ಪ್ರಕಾರ, ಈ ಸಮಸ್ಯೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಮತ್ತು ದುರಸ್ತಿ ಮಾಡಲು ಅನುಮತಿ ನಿರೀಕ್ಷೆಯಲ್ಲಿದೆ.
ಕೆಪಿಸಿಎಲ್ ಅಧಿಕಾರಿಗಳ ಪ್ರಕಾರ, ಸೋರಿಕೆಯನ್ನು ತಡೆಗಟ್ಟಲು ಸರಕಾರದ ಅನುಮತಿ ಪ್ರಕ್ರಿಯೆ ಮುಂದುವರಿದಿದೆ. ರಿಪೇರಿಗೆ ಸುಮಾರು ₹20 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ ಮತ್ತು ಪೂರ್ಣ ದುರಸ್ತಿ ಮಾಡಲು 2 ವರ್ಷಗಳು ಬೇಕಾಗಬಹುದು.
ನಿವೃತ್ತ ಇಂಜಿನಿಯರ್‌ಗಳ ಪ್ರಕಾರ, ಕಳೆದ 4-5 ವರ್ಷಗಳಿಂದ ಸೋರಿಕೆಯ ಸಮಸ್ಯೆ ಕಂಡುಬರುತ್ತಿದ್ದು, ಇದರಿಂದ ವಿದ್ಯುತ್ ಉತ್ಪಾದನೆಗೆ ತಕ್ಷಣದ ಬೆದರಿಕೆ ಇಲ್ಲ. ಆದರೆ, ಭವಿಷ್ಯದಲ್ಲಿ ಜಲಾಶಯದ ಸಾಂರಕ್ಷಣಕ್ಕೆ ಹಾನಿಯಾಗಬಹುದಾದ ಕಾರಣ ತಕ್ಷಣವೇ ದುರಸ್ತಿ ಅಗತ್ಯವಾಗಿದೆ.