Washington: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅಧಿಕಾರಕ್ಕೆ ಬಂದ ಬಳಿಕ ಅವರ ಆಸ್ತಿಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಫೋರ್ಬ್ಸ್ 2025ರ ಬಿಲಿಯನೇರ್ ಪಟ್ಟಿ ಪ್ರಕಾರ, ಟ್ರಂಪ್ ಅವರ ನಿವ್ವಳ ಆಸ್ತಿಯ(Trump Government) ಮೌಲ್ಯ 2.3 ಬಿಲಿಯನ್ ಡಾಲರ್ ನಿಂದ 5.1 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಅಂದರೆ, ಒಂದೇ ವರ್ಷದಲ್ಲಿ ಅವರ ಸಂಪತ್ತು ದ್ವಿಗುಣಗೊಂಡಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅವರು 700ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಮಾರ್ಚ್ 2024ರಲ್ಲಿ ಟ್ರಂಪ್ ಮೀಡಿಯಾ & ಟೆಕ್ನಾಲಜಿ ಗ್ರೂಪ್ (TMTG) ಪಬ್ಲಿಕ್ ಆದ ನಂತರ, ಅದರ ಸ್ವಂತ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ರುತ್ ಸೋಶಿಯಲ್ ಷೇರುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿತು. 2024ರ ಅಧ್ಯಕ್ಷೀಯ ಚುನಾವಣೆಗೆ ಮುನ್ನವೇ, ಟ್ರಂಪ್ ಅವರ ನಿವ್ವಳ ಆಸ್ತಿಯಲ್ಲಿ 865 ಮಿಲಿಯನ್ ಡಾಲರ್ ಹೆಚ್ಚಳವಾಗಿತ್ತು. ಜನವರಿ 2025ರಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ, ಈ ಷೇರುಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಯಿತು.
ಟ್ರಂಪ್ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿಯೂ ಹೂಡಿಕೆ ಮಾಡಿದ್ದು, ‘ಟ್ರಂಪ್ಕಾಯಿನ್’ ಪ್ರಾರಂಭಿಸಿದ್ದಾರೆ. ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್‌ನಲ್ಲಿ ಅವರು ದೊಡ್ಡ ಪಾಲುದಾರರಾಗಿದ್ದು, ಈ ಕ್ರಿಪ್ಟೋ ಟೋಕನ್ ನಿಂದ 75% ಲಾಭವನ್ನು ಪಡೆದಿದ್ದಾರೆ. ಡಿಸೆಂಬರ್ 2024ರಲ್ಲಿ, ಅವರು 114.75 ಮಿಲಿಯನ್ ಡಾಲರ್ ಮೌಲ್ಯದ TMTG ಷೇರುಗಳನ್ನು ಡೊನಾಲ್ಡ್ ಜೆ. ಟ್ರಂಪ್ ರಿವೊಕಬಲ್ ಟ್ರಸ್ಟ್‌ಗೆ ಸ್ಥಳಾಂತರಿಸಿದರು, ಇದನ್ನು ಅವರ ಪುತ್ರ ನಿರ್ವಹಿಸುತ್ತಿದ್ದಾರೆ.
ಟ್ರಂಪ್ ಅವರ ಸರ್ಕಾರದಲ್ಲಿ 10 ಕ್ಕೂ ಹೆಚ್ಚು ಶತಕೋಟ್ಯಾಧಿಪತಿಗಳು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ಆಸ್ತಿಯ ವಿವರಗಳು.
- ಎಲಾನ್ ಮಸ್ಕ್: $342 ಬಿಲಿಯನ್ (ಟೆಸ್ಲಾ, ಸ್ಪೇಸ್ಎಕ್ಸ್, xAI)
- ಮಾರ್ಕ್ ಜುಕರ್ಬರ್ಗ್: $216 ಬಿಲಿಯನ್ (ಮೆಟಾ)
- ಜೆಫ್ ಬೆಜೋಸ್: $215 ಬಿಲಿಯನ್ (ಅಮೆಜಾನ್)
- ಲ್ಯಾರಿ ಎಲಿಸನ್: $192 ಬಿಲಿಯನ್ (ಒರಾಕಲ್)
- ಬರ್ನಾರ್ಡ್ ಅರ್ನಾಲ್ಟ್: $178 ಬಿಲಿಯನ್ (LVMH)