2025ರ ಏಷ್ಯಾಕಪ್ ಟೂರ್ನಿಯ (2025 Asia Cup) ತಾತ್ಕಾಲಿಕ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 5ರಿಂದ ಟೂರ್ನಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 21ರಂದು ನಡೆಯಲಿದೆ.
ಈ ಬಾರಿಯ ಏಷ್ಯಾಕಪ್ ಹಕ್ಕು BCCI (ಭಾರತ ಕ್ರಿಕೆಟ್ ಮಂಡಳಿ)ಯಲ್ಲಿದೆ. ಭಾರತ-ಪಾಕಿಸ್ತಾನ್ ನಡುವಿನ ರಾಜಕೀಯ ಕಾರಣಗಳಿಂದಾಗಿ, ಪಂದ್ಯಾವಳಿಯನ್ನು “ಹೈಬ್ರಿಡ್ ಮಾದರಿಯಲ್ಲಿ” ಆಯೋಜಿಸಲಾಗುತ್ತಿದೆ. ಭಾರತದಲ್ಲಿ ಪಾಕಿಸ್ತಾನ್ ಆಡುವುದಿಲ್ಲ ಮತ್ತು ಭಾರತವೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬ ನಿಲುವಿನ ಹಿನ್ನೆಲೆ ಇದಾಗಿದೆ.
ಪಾಕಿಸ್ತಾನ್ ತಂಡದ ಎಲ್ಲಾ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗುತ್ತದೆ. ಟೂರ್ನಿಯ ಬಹುತೇಕ ಭಾಗವೂ ಯುಎಇನಲ್ಲಿ ನಡೆಯುವ ಸಾಧ್ಯತೆ ಇದೆ.
ಸಾಂಪ್ರದಾಯಿಕ ಹೋರಾಟ ಎಂದೇ ಗುರುತಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಸೆಪ್ಟೆಂಬರ್ 7ರಂದು ಡುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಈ ಬಾರಿ ಏಷ್ಯಾಕಪ್ ಟೂರ್ನಿ ಟಿ20 ಮಾದರಿಯಲ್ಲಿ ನಡೆಯಲಿದೆ. ಕಾರಣ 2026ರಲ್ಲಿ ಟಿ20 ವಿಶ್ವಕಪ್ ನಡೆಯಲಿರುವ ಹಿನ್ನೆಲೆಯಲ್ಲಿ, ಟೂರ್ನಿಯು ಈ ಫಾರ್ಮಾಟ್‌ನಲ್ಲಿ ಆಯೋಜಿಸಲಾಗುತ್ತಿದೆ. 2023ರಲ್ಲಿ ಏಷ್ಯಾಕಪ್ ಒಡಿಐ ಮಾದರಿಯಲ್ಲಿ ನಡೆದಿದ್ದನ್ನು ಇಲ್ಲಿ ನೆನಪಿಸಬಹುದು.
ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು
- ಭಾರತ
- ಪಾಕಿಸ್ತಾನ್
- ಶ್ರೀಲಂಕಾ
- ಬಾಂಗ್ಲಾದೇಶ್
- ಅಫ್ಘಾನಿಸ್ತಾನ್
- ಯುಎಇ
ಹೆಚ್ಚಿನ ಕ್ರಿಕೆಟ್ ರಸಿಕರು ಕಾದಿರುವ ಈ ಭಾರತ-ಪಾಕಿಸ್ತಾನ ಕದನ ಈಗ ಅಧಿಕೃತ ದಿನಾಂಕ ಪಡೆದಿದೆ – ಸೆಪ್ಟೆಂಬರ್ 7, 2025!