back to top
25.2 C
Bengaluru
Wednesday, October 8, 2025
HomeAutoXiaomi ಕಾರು ತಯಾರಿ ಕ್ಷೇತ್ರಕ್ಕೆ ಪ್ರವೇಶ: ಬಿಡುಗಡೆ ಆದ 3 ನಿಮಿಷಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚು...

Xiaomi ಕಾರು ತಯಾರಿ ಕ್ಷೇತ್ರಕ್ಕೆ ಪ್ರವೇಶ: ಬಿಡುಗಡೆ ಆದ 3 ನಿಮಿಷಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚು ಬುಕಿಂಗ್!

- Advertisement -
- Advertisement -

ಚೀನಾದ ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿ ಶಿಯೋಮಿ, (Xiaomi) ಈಗ ಆಟೋಮೊಬೈಲ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಮೊಬೈಲ್‌ನಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟ ನೀಡಿದಂತೆ, ಈಗ ಕಾರುಗಳಲ್ಲಿಯೂ ಅದೇ ತಂತ್ರವನ್ನು ಬಳಸುತ್ತಿದೆ. ಶಿಯೋಮಿ ಇದೀಗ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯತ್ತ ಗಮನ ಹರಿಸಿದೆ ಮತ್ತು ಇದರಲ್ಲಿ ಯಶಸ್ಸು ಕಾಣುತ್ತಿದೆ.

ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ YU7 ಎಲೆಕ್ಟ್ರಿಕ್ SUV ಚೀನಾದಲ್ಲಿ ಹೊಸ ದಾಖಲೆ ಬರೆದಿದೆ. ಈ ಕಾರು ಬಿಡುಗಡೆ ಆದ ಕೇವಲ 3 ನಿಮಿಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಬುಕಿಂಗ್ ಗಳಿಸಿತು! ಈ ವರ್ಷದ ಅತಿ ವೇಗವಾಗಿ ಬುಕಿಂಗ್ ಆದ ಕಾರುಗಳಲ್ಲಿ ಇದೊಂದು.

YU7 ಕಾರಿನ ವಿನ್ಯಾಸ, ತಂತ್ರಜ್ಞಾನ ಹಾಗೂ ಸ್ಪರ್ಧಾತ್ಮಕ ಬೆಲೆ ಗ್ರಾಹಕರನ್ನು ಬಹಳ ಆಕರ್ಷಿಸುತ್ತಿವೆ. SUV ಬಿಡುಗಡೆ ಆದ 1 ಗಂಟೆಯೊಳಗೆ 2.89 ಲಕ್ಷ ಬುಕಿಂಗ್ ದಾಖಲಾಗಿದೆ. ಈ ಕಾರಿನ ಪ್ರಾರಂಭ ಬೆಲೆ 253,500 ಯುವಾನ್ (ಸುಮಾರು ₹30 ಲಕ್ಷ).

ಈ ಕಾರು ವಿಭಿನ್ನ ಮಾದರಿಗಳಲ್ಲಿ ಲಭ್ಯವಿದ್ದು, ಗ್ರಾಹಕರ ಆಯ್ಕೆಗಾಗಿ ಸಿಂಗಲ್ ಮೋಟಾರ್ RWD, ಡ್ಯುಯಲ್ ಮೋಟರ್ AWD ರೂಪಗಳಲ್ಲಿ ಲಭ್ಯವಿದೆ. ಈ ಕಾರುಗಳು ಉತ್ತಮ ಪವರ್, ದೂರ ಪ್ರಯಾಣ ಸಾಮರ್ಥ್ಯ ಮತ್ತು ಸೌಲಭ್ಯಗಳನ್ನು ಒದಗಿಸುತ್ತವೆ.

  • 835 ಕಿ.ಮೀ ವ್ಯಾಪ್ತಿಯ RWD ಮಾದರಿ (96.3kWh ಬ್ಯಾಟರಿ)
  • 760 ಕಿ.ಮೀ ವ್ಯಾಪ್ತಿಯ AWD Pro ಮಾದರಿ (96.3kWh)
  • 770 ಕಿ.ಮೀ ವ್ಯಾಪ್ತಿಯ AWD Max ಮಾದರಿ (101.7kWh)

ಈ ಸಾಧನೆಗಳ ಮೂಲಕ ಶಿಯೋಮಿ, ಆಟೋಮೊಬೈಲ್ ಕ್ಷೇತ್ರದಲ್ಲೂ ತನ್ನದೇ ಆದ ಸ್ಥಳ ನಿರ್ಮಿಸಿಕೊಳ್ಳುತ್ತಿದೆ. ಇನ್ನು ಮುಂದೆ EV ತಯಾರಕರಿಗೆ ಶಿಯೋಮಿ ಕಠಿಣ ಸ್ಪರ್ಧಿಯಾಗಿ ಪರಿಣಮಿಸಲಿದೆ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page