back to top
20.5 C
Bengaluru
Thursday, August 14, 2025
HomeKarnatakaಈ ವರ್ಷ Greater Bengaluru ಅಥಾರಿಟಿ ಸ್ಥಾಪನೆ ಇಲ್ಲ

ಈ ವರ್ಷ Greater Bengaluru ಅಥಾರಿಟಿ ಸ್ಥಾಪನೆ ಇಲ್ಲ

- Advertisement -
- Advertisement -

Bengaluru : ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ಗ್ರೇಟರ್ ಬೆಂಗಳೂರು ಅಥಾರಿಟಿ (Greater Bengaluru Authority)ಯಾಗಿ ಪರಿವರ್ತಿಸುವ ಯೋಜನೆ ಮುಂದೂಡಿದೆ. ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಈ ವರ್ಷ ಪ್ರಾಧಿಕಾರ ಸ್ಥಾಪನೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಜಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಪಾಲಿಕೆಗಳಿಗೆ ಜನವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅದುವರೆಗೆ ಪ್ರಸ್ತುತ ಬಿಬಿಎಂಪಿ ಆಡಳಿತ ಮುಂದುವರಿಯಲಿದೆ.

ಹಿಂದಿನ ಸರ್ಕಾರದ ಕ್ರಮಗಳು

  • ಮೇ 5ರಿಂದ ಜಾರಿಗೆ ತರಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
  • ಬಿಬಿಎಂಪಿ ಸುಧಾರಣಾ ಸಮಿತಿ (ಅಧ್ಯಕ್ಷ ಬಿ.ಎಸ್. ಪಾಟೀಲ್) ವರದಿಗೆ ಸಂಪುಟ ಅನುಮೋದನೆ ನೀಡಿತ್ತು.
  • ಪ್ರಸ್ತಾವನೆಯಂತೆ ಬಿಬಿಎಂಪಿಯನ್ನು 5 ಭಾಗಗಳಾಗಿ ಮತ್ತು 400 ವಾರ್ಡ್‌ಗಳಾಗಿ ವಿಭಜಿಸಲು ನಿರ್ಧರಿಸಲಾಗಿತ್ತು.

ವಿಸ್ತರಣೆ ಮತ್ತು ಆಡಳಿತ ಬದಲಾವಣೆ

  • ಪ್ರಸ್ತುತ BBMP ವ್ಯಾಪ್ತಿ: 708 ಚ.ಕಿ.ಮೀ.
  • Greater Bengaluru Authority ವ್ಯಾಪ್ತಿ: 1400 ಚ.ಕಿ.ಮೀ.

ಇದರ ಅಡಿಯಲ್ಲಿ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಮೆಟ್ರೊ, ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸೇರಿದಂತೆ ಎಲ್ಲಾ ನಗರ ಇಲಾಖೆಗಳು ಕಾರ್ಯನಿರ್ವಹಿಸಲಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page