ಬೆಂಗಳೂರು ಮೆಟ್ರೋ ಮೂರನೇ ಹಂತ (Metro Phase 3) ಯೋಜನೆಗಾಗಿ 6500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಹಾಗೂ ಸ್ಥಳಾಂತರಿಸಲು BMRCL ತೀರ್ಮಾನಿಸಿದೆ.
ಎರಡು ಕಾರಿಡಾರ್‌ಗಳ ಮಾರ್ಗ
- 1ನೇ ಕಾರಿಡಾರ್: ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ, 32.15 ಕಿಮೀ, 21 ನಿಲ್ದಾಣಗಳು
- 2ನೇ ಕಾರಿಡಾರ್: ಹೊಸಹಳ್ಳಿಯಿಂದ ಕಡಬಗೆರೆಯವರೆಗೆ, 12.50 ಕಿಮೀ, 9 ನಿಲ್ದಾಣಗಳು
- ಒಟ್ಟು ಉದ್ದ ಮತ್ತು ವೆಚ್ಚ: ಮೂರನೇ ಹಂತದ ಮೆಟ್ರೋ ಮಾರ್ಗ ಒಟ್ಟು 44.65 ಕಿಮೀ ಉದ್ದವಿದ್ದು, ಕಾಮಗಾರಿಗೆ 15,611 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಮರಗಳ ಕಟಾವಿಗೆ ಸಂಬಂಧಿಸಿ ಪರಿಸರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಮೆಟ್ರೋ ಅಧಿಕಾರಿಗಳೊಂದಿಗೆ ಸಭೆಯೂ ನಡೆದಿದ್ದು, ನೂರಾರು ಹೋರಾಟಗಾರರು ಭಾಗಿಯಾಗಿದ್ದಾರೆ.
ಹಿಂದೆ ಕಿತ್ತಳೆ ಮಾರ್ಗ ಕಾಮಗಾರಿ ವೇಳೆ 11 ಸಾವಿರ ಮರಗಳನ್ನು ಕಡಿಯಲು ಬಿಎಂಆರ್ಸಿಎಲ್ ಮುಂದಾಗಿತ್ತು. ಪರಿಸರ ಹೋರಾಟಗಾರರ ಒತ್ತಡದಿಂದ ಆ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು.
ನಗರದಲ್ಲಿ ಈಗಾಗಲೇ ಶುದ್ಧವಾದ ಗಾಳಿ ಕೊರತೆ ಉಂಟಾಗಿದೆ. ಇನ್ನೂ ಮರಗಳನ್ನು ಕಡಿದರೆ, ಬೆಂಗಳೂರು ದೆಹಲಿಯಂತೆ ಮಾಲಿನ್ಯ ನಗರವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.