ಚೀನಾದಲ್ಲಿ ಆರಂಭವಾದ ಮಹಿಳಾ ಹಾಕಿ ಏಷ್ಯಾಕಪ್ 2025ರಲ್ಲಿ (Asia Cup 2025) ಭಾರತ ತನ್ನ ಮೊದಲ ಪಂದ್ಯದಲ್ಲೇ ಥೈಲ್ಯಾಂಡ್ ವಿರುದ್ಧ 11-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿತು.
ಅನುಭವಿ ಆಟಗಾರ್ತಿಯರ ಗೈರಿಗೆಯಲ್ಲೂ ತಂಡ ಶಕ್ತಿಶಾಲಿಯಾಗಿ ಆಡಿತು. ಮುಮ್ತಾಜ್ ಖಾನ್, ಉದಿತಾ ಮತ್ತು ಬ್ಯೂಟಿ ಡಂಗ್ ಡಂಗ್ ತಲಾ ಎರಡು ಗೋಲು ಗಳಿಸಿದರು. ಸಂಗೀತಾ ಕುಮಾರಿ, ನವನೀತ್ ಕೌರ್, ಲಾಲ್ರೆಮ್ಸಿಯಾಮಿ, ಶರ್ಮಿಳಾ ದೇವಿ ಹಾಗೂ ರುತುಜಾ ಪಿಸಲ್ ತಲಾ ಒಂದು ಗೋಲು ಬಾರಿಸಿದರು. ಹೀಗಾಗಿ ಮೊದಲಾರ್ಧದಲ್ಲೇ 5-0 ಮುನ್ನಡೆ ಪಡೆದ ಭಾರತ ಕೊನೆಯಲ್ಲಿ 11-0 ಜಯ ಸಾಧಿಸಿತು.
ಭಾರತ ತಂಡವು ಜಪಾನ್, ಥೈಲ್ಯಾಂಡ್ ಮತ್ತು ಸಿಂಗಾಪುರ್ ಇರುವ ಪೂಲ್ ಬಿ ಯಲ್ಲಿ ಆಡುತ್ತಿದೆ. ಸೆಪ್ಟೆಂಬರ್ 7 ರಂದು ಜಪಾನ್ ಮತ್ತು ಸೆಪ್ಟೆಂಬರ್ 8 ರಂದು ಸಿಂಗಾಪುರ್ ವಿರುದ್ಧ ಪಂದ್ಯಗಳಿವೆ. ಈ ಏಷ್ಯಾಕಪ್‌ನ ಫಲಿತಾಂಶವೇ ಮುಂದಿನ ವರ್ಷ ಬೆಲ್ಜಿಯಂ ಹಾಗೂ ನೆದರ್ಲ್ಯಾಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆಯನ್ನು ನಿರ್ಧರಿಸುತ್ತದೆ.