ಅಬುಧಾಬಿಯಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ (Asia Cup Cricket) ಟೂರ್ನಿಯ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಹಾಂಕಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಅಫ್ಘಾನಿಸ್ತಾನದ ಬ್ಯಾಟಿಂಗ್: ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ಅಫ್ಘಾನಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ, ಸೆಡಿಕುಲ್ಲಾ ಅಟಲ್ ( ಅರ್ಧಶತಕ) ಹಾಗೂ ಒಮರ್ಜೈ (21 ಎಸೆತಗಳಲ್ಲಿ 53) ಅವರ ಅದ್ಭುತ ಆಟದಿಂದ 20 ಓವರ್‌ಗಳಲ್ಲಿ 189 ರನ್ ಕಲೆಹಾಕಿತು.
190 ರ ಗುರಿ ಬೆನ್ನತ್ತಿದ ಹಾಂಕಾಂಗ್ ತಂಡ ಆರಂಭದಲ್ಲೇ ಕುಸಿದು, 20 ಓವರ್‌ಗಳಲ್ಲಿ ಕೇವಲ 94/9 ರನ್ ಗಳಿಸಿತು. ಬಾಬರ್ ಹಯಾತ್ (39) ಮಾತ್ರ ಸ್ವಲ್ಪ ಹೋರಾಟ ನಡೆಸಿದರು. ಅಫ್ಘಾನ್ ಬೌಲರ್ಗಳು ಪೂರ್ತಿ ಹಿಡಿತ ಸಾಧಿಸಿ, ಹಾಂಕಾಂಗ್ ತಂಡವನ್ನು 94 ರನ್ ಅಂತರದಿಂದ ಸೋಲಿಸಿದರು.
ಈ ಜಯದೊಂದಿಗೆ ಅಫ್ಘಾನಿಸ್ತಾನ ಏಷ್ಯಾಕಪ್ ಟಿ20 ಇತಿಹಾಸದಲ್ಲಿ ಅತಿ ಹೆಚ್ಚು ಅಂತರದಿಂದ ಗೆದ್ದ ಮೂರನೇ ತಂಡವಾಗಿ ದಾಖಲಾಗಿತು.
ಅತಿ ಹೆಚ್ಚು ಅಂತರದ ಗೆಲುವುಗಳ ಪಟ್ಟಿ
- ಪಾಕಿಸ್ತಾನ – 155 ರನ್ vs ಹಾಂಕಾಂಗ್ (2022)
- ಭಾರತ – 101 ರನ್ vs ಅಫ್ಘಾನಿಸ್ತಾನ (2022)
- ಅಫ್ಘಾನಿಸ್ತಾನ – 94 ರನ್ vs ಹಾಂಕಾಂಗ್ (2025)
- ಯುಎಇ – 71 ರನ್ vs ಓಮನ್ (2016)
- ಅಫ್ಘಾನಿಸ್ತಾನ – 66 ರನ್ vs ಹಾಂಕಾಂಗ್ (2016)
ಇಂದು ಭಾರತ vs ಯುಎಇ: ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಯುಎಇ ತಂಡಗಳು ರಾತ್ರಿ 8 ಗಂಟೆಗೆ ಮುಖಾಮುಖಿಯಾಗುತ್ತವೆ.







