back to top
26.5 C
Bengaluru
Sunday, November 24, 2024
HomeSportsKabaddiPro Kabaddi League - Day 8 ಎಂಟನೇ ದಿನದ ಆಟಗಳು

Pro Kabaddi League – Day 8 ಎಂಟನೇ ದಿನದ ಆಟಗಳು

- Advertisement -
- Advertisement -

ಪ್ರೊ ಕಬಡ್ಡಿ 2021 – ಆವೃತ್ತಿ 8 ರ ( Pro Kabaddi League) ಎಂಟನೇ ದಿನದ ಎರಡು ರೋಮಾಂಚಕ ಆಟಗಳು ಅಭಿಮಾನಿಗಳನ್ನು ರಂಜಿಸಿತು. ಆರಂಭಿಕ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ಕಳೆದ ಸೀಸನ್‌ನ ರನ್ನರ್ ಅಪ್ ದಬಂಗ್ ಡೆಲ್ಲಿ K.C. (Dabang Delhi K.C.) ವಿರುದ್ಧ ಹೋರಾಡಿತು. ಎರಡನೇ ಪಂದ್ಯದಲ್ಲಿ ಎರಡು ಬಾರಿಯ ಫೈನಲಿಸ್ಟ್‌ಗಳಾದ ಗುಜರಾತ್ ಜೈಂಟ್ಸ್ (Gujarat Giants) ಮತ್ತು ಯುಪಿ ಯೋದ್ಧಾ (UP Yoddha) ಸೆಣಸಾಡಿದವು.

ಪಂದ್ಯ 1: Dabang Delhi K.C. vs Bengal Warriors

Dabang Delhi K.C. vs Bengal Warriors Pro Kabaddi League 2021

ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ಧ 17 ಅಂಕಗಳ ಅಂತರದಲ್ಲಿ 52-35 ಅಂಕಗಳೊಂದಿಗೆ ಜಯಗಳಿಸುವ ಮೂಲಕ ದಬಂಗ್ ಡೆಲ್ಲಿ K.C. (Dabang Delhi K.C.) ಪ್ರೊ ಕಬಡ್ಡಿ ಪಾಯಿಂಟ್ಸ್ ಟೇಬಲ್ 2021 ರಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ದಬಂಗ್ ಡೆಲ್ಲಿ K.C. ಪರ ನವೀನ್ ಕುಮಾರ್ (Naveen Kumar) 24 ಅಂಕಗಳನ್ನು ಗಳಿಸಿದರೆ, ವಿಜಯ್‌ (Vijay) ಸೂಪರ್ 10 ನೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಬೆಂಗಾಲ್ ಪರವಾಗಿ ರೈಡರ್‌ಗಳಾದ ಮಣಿಂದರ್ ಸಿಂಗ್ (Maninder Singh) ಮತ್ತು ಸುಕೇಶ್ ಹೆಗ್ಡೆ (Sukesh Hegde) ಒಟ್ಟು 25 ಅಂಕಗಳನ್ನು ಗಳಿಸಿದರು.

ಪಂದ್ಯ 2: UP Yoddha vs Gujarat Giants

ದಿನದ ಎರಡನೆಯ ಪಂದ್ಯದಲ್ಲಿ ಯುಪಿ ಯೋದ್ಧಾ (UP Yoddha) ಮತ್ತು ಗುಜರಾತ್ ಜೈಂಟ್ಸ್ (Gujarat Giants) ರೋಚಕ ಆಟವಾಡಿದವು. ಮೊದಲಾರ್ಧದಲ್ಲಿ ಗುಜರಾತ್ ಪ್ರಾಬಲ್ಯ ಸಾಧಿಸಿದರೆ, ಉತ್ತರಾರ್ಧದಲ್ಲಿ ಯುಪಿ ಯೋದ್ಧಾ ಮೇಲಗೈ ಸಾಧಿಸಿ ಅಂತಿಮವಾಗಿ ಪಂದ್ಯವು 32-32 ಡ್ರಾದಲ್ಲಿ ಕೊನೆಗೊಂಡಿತು.

ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ರಾಕೇಶ್ ನರ್ವಾಲ್ (Rakesh Narwal) ಮತ್ತು ಪರ್ದೀಪ್ ನರ್ವಾಲ್ (Pardeep Narwal) ಸೂಪರ್ 10 ಗಳಿಸಿದರು. ಯುಪಿ ಯೋದ್ಧಾ ಪರ ಸುರೇಂದರ್ ಗಿಲ್ ಗಾಯಗೊಂಡಿದ್ದರೂ 4 ರೇಡ್ ಪಾಯಿಂಟ್‌ಗಳು ಮತ್ತು 2 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಒಟ್ಟು 6 ಪಾಯಿಂಟ್‌ಗಳನ್ನು ಗಳಿಸಿದರು.

PKL 2021 Day – 8 Score Card

PKL 2021 ರ 8ನೇ ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Pro Kabaddi League Season 8 PKL 2021 Day 8 Points Table Score card

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page