Bengaluru: ದೇಶದ ಮೊದಲ ಹೈಬ್ರಿಡ್ ಫೋನ್ ಆಗಿ HMD ಟಚ್ 4G (HMD Touch 4G Hybrid Phone) ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಫೀಚರ್ ಫೋನ್ ಮತ್ತು ಸ್ಮಾರ್ಟ್‌ಫೋನ್ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಫೋನ್ 3.2-ಇಂಚಿನ ಟಚ್‌ಸ್ಕ್ರೀನ್, ಡ್ಯುಯಲ್ ಸಿಮ್ ಬೆಂಬಲ ಮತ್ತು ಹಿಂಬದಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಜೊತೆಗೆ ಫ್ಲ್ಯಾಶ್ ಯೂನಿಟ್‌ನೊಂದಿಗೆ ಬರುತ್ತದೆ. 64MB RAM ಮತ್ತು 128MB ಸಂಗ್ರಹಣೆಯೊಂದಿಗೆ ಫೋನ್ S30+ ಟಚ್ ಬಳಕೆದಾರ ಇಂಟರ್ಫೇಸ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ತುರ್ತು ಕರೆಗಾಗಿ ಕ್ವಿಕ್-ಕಾಲ್ ಬಟನ್ ಕೂಡ ಇದೆ.
ಬೆಲೆ ಮತ್ತು ಲಭ್ಯತೆ: ಭಾರತದಲ್ಲಿ HMD ಟಚ್ 4G ಬೆಲೆ 3,999 ರೂ. ಆಗಿದೆ. ಸಯಾನ್ ಮತ್ತು ಗಾಢ ನೀಲಿ ಬಣ್ಣಗಳಲ್ಲಿ HMD ಇಂಡಿಯಾ website ಮೂಲಕ ಮಾರಾಟವಾಗುತ್ತಿದೆ. ಶೀಘ್ರದಲ್ಲೆ ಇದನ್ನು ಇ-ಕಾಮರ್ಸ್ ಮತ್ತು ಆಯ್ದ offline ಅಂಗಡಿಗಳಿಂದ ಖರೀದಿಸಬಹುದಾಗಿದೆ.
ಪ್ರಮುಖ ಫೀಚರ್ಸ್
- 3.2-ಇಂಚಿನ 2.5D ಟಚ್-ಸ್ಕ್ರೀನ್ ಡಿಸ್ಪ್ಲೇ
- Unisoc T127 chipset, 64MB RAM ಮತ್ತು 128MB ಸಂಗ್ರಹಣೆ
- ಡ್ಯುಯಲ್ ನ್ಯಾನೋ ಸಿಮ್ ಬೆಂಬಲ; ಮೈಕ್ರೋ SD ಕಾರ್ಡ್ ಮೂಲಕ 32GB ವರೆಗೆ ವಿಸ್ತರಣೆ
- S30+ ಟಚ್ ಇಂಟರ್ಫೇಸ್ ಮತ್ತು ಕ್ಲೌಡ್ ಆಪ್ಸ್ ಸಪೋರ್ಟ್
- ಕ್ರಿಕೆಟ್ ಸ್ಕೋರ್, ಸುದ್ದಿ, ಹವಾಮಾನ ನವೀಕರಣಗಳು, HTML5 ಆಟಗಳು
- ಹಿಂಬದಿ 2 ಮೆಗಾಪಿಕ್ಸೆಲ್ ಕ್ಯಾಮೆರಾ + LED ಫ್ಲ್ಯಾಷ್; ಮುಂಭಾಗ 0.3 ಮೆಗಾಪಿಕ್ಸೆಲ್ VGA ಕ್ಯಾಮೆರಾ
- ತುರ್ತು ಕರೆಗಾಗಿ ಕ್ವಿಕ್-ಕಾಲ್ ಬಟನ್
- ಎಕ್ಸ್ಪ್ರೆಸ್ ಚಾಟ್ ಮೂಲಕ Android ಮತ್ತು iOS ಜೊತೆ ಪಠ್ಯ ಮತ್ತು ವೀಡಿಯೊ ಕರೆ
- ಸಂಪರ್ಕ ಮತ್ತು ಬ್ಯಾಟರಿ
- 4G LTE, VoLTE, Wi-Fi 802.11, ಬ್ಲೂಟೂತ್ 5.0, GPS, Beidou, USB ಟೈಪ್-C
- 2,000mAh ಬದಲಾಯಿಸಬಹುದಾದ ಬ್ಯಾಟರಿ; ಒಂದೇ ಚಾರ್ಜ್‌ನಲ್ಲಿ 30 ಗಂಟೆಗಳ ಬ್ಯಾಟರಿ ಆಯುಷ್ಯ