Bengaluru (Bangalore) : ಅಂತರರಾಷ್ಟ್ರೀಯ ಮಾದಕವಸ್ತು ಸೇವನೆ ಹಾಗೂ ಸಾಗಣೆ ವಿರೋಧಿ ದಿನ (International Day Against Drug Abuse & Illicit Trafficking)ದ ಅಂಗವಾಗಿ ರಾಜ್ಯದ ಕಮಿಷನರೇಟ್ ಹಾಗೂ ಆಯಾ ಜಿಲ್ಲೆಗಳಲ್ಲಿ ಪೊಲೀಸರು (Police) ಜಾಗೃತಿ ಕಾರ್ಯಕ್ರಮ ಆಯೋಜಿಸಿ ಡ್ರಗ್ಸ್ (Drugs) ಸಾಗಣೆ ಹಾಗೂ ಮಾರಾಟದ ವಿರುದ್ಧ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ 2021ರ ಮೇ ತಿಂಗಳಿನಿಂದ 2022ರ ಮೇ ತಿಂಗಳ ಅವಧಿಯಲ್ಲಿ 14,776 ಪ್ರಕರಣ ದಾಖಲಿಸಿಕೊಂಡು 15,861 ಆರೋಪಿಗಳನ್ನು ಬಂಧಿಸಿ ಜಪ್ತಿ ಮಾಡಲಾಗಿದ್ದ ₹ 67.40 ಕೋಟಿ ಮೌಲ್ಯದ ಮಾದಕ ವಸ್ತುವನ್ನು (ಡ್ರಗ್ಸ್) ಪೊಲೀಸರು ಭಾನುವಾರ ದಾಬಸ್‌ಪೇಟೆ ಬಳಿಯ ರಾಮ್ಕಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಕಮಿಷನರ್ ಎ. ಸುಬ್ರಹ್ಮಣ್ಯೇಶ್ವರ ರಾವ್, ಸಿಸಿಬಿ ಜಂಟಿ ಕಮಿಷನರ್ ರಮಣ್ ಗುಪ್ತ, ಡಿಸಿಪಿ ಎಸ್.ಡಿ. ಶರಣಪ್ಪ ಭಾಗವಹಿಸಿದರು.