Hunsur, Mysore (Mysuru) : ವಿಶ್ವ ಮಾದಕ ವಸ್ತು ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ (International Day Against Drug Abuse & Illicit Trafficking) ಅಂಗವಾಗಿ ಹುಣಸೂರು ನಗರದ ಗ್ರಾಮಾಂತರ Police Station ನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ DySp ರವಿಪ್ರಸಾದ್ “ಮಾದಕ ವಸ್ತುಗಳನ್ನು (Drugs) ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಯುವಕರು ಚಟದಿಂದ ದೂರ ಇರಬೇಕು. ಮಾದಕ ಪೇಯಗಳು ಅಕ್ರವಾಗಿ ಸಾಗಣೆ ನಡೆದಿದ್ದು, ಮಾಹಿತಿ ನೀಡುವವರ ಹೆಸರನ್ನು ಗೋಪ್ಯತೆ ಕಾಪಾಡಿ, ಅಕ್ರಮ ಸಾಗಣೆ ಮಾಡುವ ವ್ಯಕ್ತಿಯನ್ನು ಕಾನೂನು ಚೌಕಟ್ಟಿನಲ್ಲಿ ಬಂಧಿಸಿ ಕ್ರಮ ವಹಿಸಲಾಗುವುದು. ಅರಣ್ಯದಂಚಿನ ಪ್ರದೇಶದಲ್ಲಿ ಗಾಂಜಾ ಬೆಳೆಯುವವರಿದ್ದು, ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದಲ್ಲಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಬದ್ಧ” ಎಂದು ಹೇಳಿದರು.
ಸಿಪಿಐ ರವಿ, ಶ್ರೀನಿವಾಸ್, ಹುಣಸೂರು ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ತಂಡ ಜಾಗೃತಿ ಜಾಥಾ ನಡೆಸಿತು.