
Beijing: ಅಮೆರಿಕದೊಂದಿಗೆ ಚೀನಾದ ಸಂಬಂಧ ಈಗ ತೀವ್ರವಾಗಿ ಹದಗೆಟ್ಟಿದೆ. ಇಬ್ಬರೂ ಸುಂಕದ ವಿಷಯದಲ್ಲಿ ಪರಸ್ಪರ ಟಕ್ಕಿಯಿಟ್ಟಿರುವಂತಾಗಿದೆ. ಇಂತಹ ಸಮಯದಲ್ಲಿ ಚೀನಾ ಭಾರತದೊಂದಿಗೆ (India-China) ಪುನಃ ಉತ್ತಮ ಸಂಬಂಧ ಬೆಸೆಯಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ.
ಇದನ್ನು ಸಮರ್ಥಿಸುವಂತೆ, ಕೇವಲ ನಾಲ್ಕು ತಿಂಗಳಲ್ಲಿ ಚೀನಾ 85 ಸಾವಿರಕ್ಕೂ ಹೆಚ್ಚು ಭಾರತೀಯರಿಗೆ ವೀಸಾ ನೀಡಿದೆ. ಇದು ಅಚ್ಚರಿಸುಸಗೆಯ ಸಂಗತಿಯಾಗಿದ್ದು, ಭಾರತ-ಚೀನಾ ನಡುವಿನ ಸಂಬಂಧ ಇನ್ನೂ ಸಂಪೂರ್ಣ ಸರಿ ಆಗದಿದ್ದರೂ, ಚೀನಾ ಈ ನಿಟ್ಟಿನಲ್ಲಿ ಬದಲಾವಣೆ ತೋರಿಸುತ್ತಿರುವುದಾಗಿ ಹೇಳಬಹುದು. ಭಾರತವು ಮೂರು ವರ್ಷಗಳ ಹಿಂದೆ ಹಲವಾರು ಚೀನೀ ಆ್ಯಪ್‌ಗಳಿಗೆ ನಿಷೇಧ ಹೇರಿದ ಬಳಿಕ, ಚೀನಾದ ಜಿನಸಿಗೆ ಬದಲಾಗಿ ದೇಶೀಯ ಉತ್ಪನ್ನಗಳ ಬಳಕೆಗೆ ಉತ್ತೇಜನೆ ನೀಡಲಾಗಿತ್ತು. ಅದಲ್ಲದೇ ಗಡಿಭಾಗದಲ್ಲಿಯೂ ಉದ್ವಿಗ್ನತೆ ಇತ್ತು.
ಈ ನಡುವೆ, ಭಾರತ-ಚೀನಾ ಸೇನೆಗಳು ಪೂರ್ವ ಲಡಾಖ್‌ನಿಂದ ಹಿಂಪಡೆಯುತ್ತಿದ್ದಂತೆ, ಜನರಿಂದ ಜನರಿಗೆ ಸಂಬಂಧ ಬಲಪಡಿಸಲು ಚೀನಾ ಮುಂದಾಗಿದೆ. 2025ರ ಏಪ್ರಿಲ್ 9ರ ತನಕ ಭಾರತದಲ್ಲಿನ ಚೀನೀ ರಾಯಭಾರ ಕಚೇರಿ ಮತ್ತು ಕಾನ್ಸುಲೆಟ್‌ಗಳು ಒಟ್ಟಿಗೆ 85,000 ಕ್ಕೂ ಹೆಚ್ಚು ವೀಸಾಗಳನ್ನು ನೀಡಿದ್ದಾರೆ.
- ಚೀನಾ ಈಗ ಭಾರತೀಯ ಪ್ರವಾಸಿಗರಿಗೆ ಹೊಸದಾಗಿ ಹಲವಾರು ಸಡಿಲಿಕೆಗಳನ್ನು ನೀಡಿದೆ,
- ಚಿಕ್ಕ ಭೇಟಿಗಾಗಿ ಬರುವವರಿಗೆ ಬಯೋಮೆಟ್ರಿಕ್ ಡೇಟಾ ಕೊಡಬೇಕಾದ ಅಗತ್ಯವಿಲ್ಲ
- ಅರ್ಜಿ ಸಮಯ ಕಡಿಮೆ
- ವೀಸಾ ಶುಲ್ಕವೂ ಇಳಿಸಲಾಗಿದೆ
ಇವುಗಳಿಂದ ವ್ಯಾಪಾರ, ಶಿಕ್ಷಣ ಮತ್ತು ಇತರ ಪ್ರಯಾಣಗಳು ಸುಲಭವಾಗಲಿವೆ. ಗಡಿಭಾಗದ ಉದ್ವಿಗ್ನತೆ ಇದ್ದರೂ, ಆರ್ಥಿಕ ಸಂಬಂಧ ಹೆಚ್ಚಿಸುವ ಯತ್ನ ನಡೆಯುತ್ತಿದೆ. ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್ ಹೇಳುವಂತೆ, ಅಮೆರಿಕದ ರಕ್ಷಣಾತ್ಮಕ ನೀತಿಗಳಿಗೆ ಪ್ರತಿಕ್ರಿಯೆಯಾಗಿ, ಭಾರತ-ಚೀನಾ ಸೇರಿ ಜಾಗತಿಕ ಸಮಸ್ಯೆಗಳನ್ನು ಎದುರಿಸಬೇಕು.
ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸಮಸ್ಯೆಗಳಿದ್ದರೂ, ವೀಸಾ ಪ್ರಮಾಣ ಹೆಚ್ಚಾದುದು ಚೀನಾದ ‘ಮೃದು ಶಕ್ತಿ’ ಪ್ರದರ್ಶನವೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಮುಖ್ಯವಾಗಿ, ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಮತ್ತೆ ಚೀನಾದ ವಿಶ್ವವಿದ್ಯಾಲಯಗಳತ್ತ ಹೆಜ್ಜೆ ಇಡುತ್ತಿದ್ದಾರೆ.