Home Karnataka Mandya ಆದಿಚುಂಚನಗಿರಿ ಸಂಸ್ಥಾನ ಮಠದಲ್ಲಿ ಕಾಲಭೈರವಾಷ್ಟಮಿ

ಆದಿಚುಂಚನಗಿರಿ ಸಂಸ್ಥಾನ ಮಠದಲ್ಲಿ ಕಾಲಭೈರವಾಷ್ಟಮಿ

310
Nagamangala Mandya Sri Adichunchanagiri Mahasamsthana Math KalaBhairavashtami

Nagamangala, Mandya : ರಾಜ್ಯದ ವಿವಿಧ ಭಾಗಗಳಿಂದ ಆದಿಚುಂಚನಗಿರಿ ಸಂಸ್ಥಾನ ಮಠಕ್ಕೆ (Sri Adichunchanagiri Mahasamsthana Math) ಬಂದಿದ್ದ ಸಾವಿರಾರು ಭೈರವ ಮಾಲಾಧಾರಿಗಳು ಮತ್ತು ಭಕ್ತರ ಸಮ್ಮುಖದಲ್ಲಿ ಕಾಲಭೈರವಾಷ್ಟಮಿ (KalaBhairavashtami) ವಿಜೃಂಭಣೆಯಿಂದ ನಡೆಯಿತು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ (Sri Dr. Nirmalanandanatha Swamiji) ಕಾಲಭೈರವೇಶ್ವರ ಸ್ವಾಮಿ ವಿಗ್ರಹಕ್ಕೆ ಅಭಿಷೇಕ, ಪುಷ್ಪಾರ್ಚನೆ, ಮಹಾ ಮಂಗಳಾರತಿ ನೆರೆವೇರಿಸಿದರು.

ಕಾಲಭೈರವಾಷ್ಟಮಿ ಅಂಗವಾಗಿ ಮಠದಲ್ಲಿ ಎರಡು ದಿನ ಸಂಗೀತೋತ್ಸವ, ಭಜನೆ, ಭೈರವ ಮಾಲಾಧಾರಿಗಳ ವಿಶೇಷ ಪೂಜೆ, ಗಿರಿ ಪ್ರದಕ್ಷಿಣೆ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಶೈಲನಾಥ ಸ್ವಾಮೀಜಿ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page