Home Karnataka Hassan Badava Rascal ವಿಜಯೋತ್ಸವ: ಅರಸೀಕೆರೆಗೆ ನಟ ಧನಂಜಯ್

Badava Rascal ವಿಜಯೋತ್ಸವ: ಅರಸೀಕೆರೆಗೆ ನಟ ಧನಂಜಯ್

Arsikere Hassan Badava Rascal Daali Dhananjay

Arsikere, Hassan : ಬಡವ ರಾಸ್ಕಲ್ (Badava Rascal) ಚಿತ್ರದ ವಿಜಯೋತ್ಸವದ ಅಂಗವಾಗಿ ಅರಸೀಕೆರೆ ನಗರದ ಸಾಧನ ಚಿತ್ರಮಂದಿರಕ್ಕೆ ನಟ ಧನಂಜಯ್ (Actor Daali Dhananjay) ಆಗಮಿಸಿ ಶಾಸಕ ಕೆ. ಎಂ. ಶಿವಲಿಂಗೇಗೌಡ ರವರ ಜೊತೆ ಚಿತ್ರ ವೀಕ್ಷಿಸಿದರು.

ಸುದ್ಧಿಗಾರರೊಡನೆ ಮಾತನಾಡಿದ ಧನಂಜಯ್ ‘ಕನ್ನಡ ಸಿನಿಮಾಗಳನ್ನು ಹೆಚ್ಚೆಚ್ಚು ವೀಕ್ಷಿಸುವ ಮೂಲಕ ಕನ್ನಡದ ಅಭಿಮಾನಿಗಳು ಹಾಗೂ ಕನ್ನಡಿಗರು ಕಲಾವಿದರನ್ನು ಪ್ರೋತ್ಸಾಹಿಸಿ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ, ನಾಡು ನುಡಿ, ಸಂಸ್ಕೃತಿ ಉಳಿಸಬೇಕು. ಬಡವ ರಾಸ್ಕಲ್ ಸಿನಿಮಾಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು ನಾವುಗಳು ಕಲಾವಿದರಾಗಿ ಬೆಳೆಯಲು ಸಾಧ್ಯವಾಗುತ್ತಿದೆ, ಸದಾ ಕನ್ನಡಿಗರ ಪ್ರೀತಿ ಹೀಗೆಯೇ ನನ್ನ ಮೇಲಿರಲಿ’ ಎಂದು ಹೇಳಿದರು.

ಡಾಲಿ ಧನಂಜಯ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಕ್ರೇನ್ ಮೂಲಕ ದೊಡ್ಡ ಹೂವಿನ ಹಾರ ಹಾಕಿ ಸ್ವಾಗತಿಸಿದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version