back to top
21.4 C
Bengaluru
Saturday, August 30, 2025
HomeNewsAsia Cup 2025: 93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ Oman ವಿರುದ್ಧ

Asia Cup 2025: 93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ Oman ವಿರುದ್ಧ

- Advertisement -
- Advertisement -

ಸೆಪ್ಟೆಂಬರ್ 9ರಿಂದ ಏಷ್ಯಾಕಪ್ ಕ್ರಿಕೆಟ್ (Asia Cup 2025) ಟೂರ್ನಿ ಆರಂಭವಾಗಲಿದೆ. ಆರಂಭಿಕ ಪಂದ್ಯ ಅಫ್ಘಾನಿಸ್ತಾನ ಹಾಗೂ ಹಾಂಗ್ ಕಾಂಗ್ ನಡುವೆ ನಡೆಯಲಿದೆ. ಈ ಬಾರಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ.

ಗುಂಪು ಹಂಚಿಕೆ

  • ಎ’ ಗುಂಪು – ಭಾರತ, ಪಾಕಿಸ್ತಾನ, ಯುಎಇ, ಓಮನ್
  • ಬಿ’ ಗುಂಪು – ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಗ್ ಕಾಂಗ್

ಭಾರತದ ಪಂದ್ಯಗಳು ಸೆಪ್ಟೆಂಬರ್ 10ರಿಂದ ಪ್ರಾರಂಭವಾಗುತ್ತವೆ. ಗುಂಪು ಹಂತದಲ್ಲಿ ಭಾರತ ಪಾಕಿಸ್ತಾನ, ಯುಎಇ ಹಾಗೂ ಓಮನ್ ವಿರುದ್ಧ ಆಡಲಿದೆ.

ಏಷ್ಯಾಕಪ್ ಆಯೋಜನೆಯ ಹಕ್ಕು ಬಿಸಿಸಿಐಗೆ ಇದ್ದರೂ, ಎಲ್ಲಾ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗುತ್ತಿದೆ. ಕಾರಣ – ಪಾಕಿಸ್ತಾನ ಭಾರತದಲ್ಲಿ ಆಡಲು ಒಪ್ಪದಿರುವುದು.

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಓಮನ್ ವಿರುದ್ಧ ಆಡಲು ಸಜ್ಜಾಗಿದೆ. ಓಮನ್ 2014ರಲ್ಲಿ ಅಂತರರಾಷ್ಟ್ರೀಯ ಸ್ಥಾನಮಾನ ಪಡೆದಿದೆ.

  • ಸೆಪ್ಟೆಂಬರ್ 10 – ಭಾರತ vs ಯುಎಇ
  • ಸೆಪ್ಟೆಂಬರ್ 14 – ಭಾರತ vs ಪಾಕಿಸ್ತಾನ
  • ಸೆಪ್ಟೆಂಬರ್ 19 – ಭಾರತ vs ಓಮನ್

ಭಾರತದ ಹಳೆಯ ದಾಖಲೆಗಳು

  • ಶ್ರೀಲಂಕಾ ವಿರುದ್ಧ 32 ಪಂದ್ಯಗಳಲ್ಲಿ 22 ಗೆಲುವು
  • ಪಾಕಿಸ್ತಾನ ವಿರುದ್ಧ 13ರಲ್ಲಿ 10 ಗೆಲುವು
  • ಬಾಂಗ್ಲಾದೇಶ ವಿರುದ್ಧ 17ರಲ್ಲಿ 16 ಗೆಲುವು
  • ಅಫ್ಘಾನಿಸ್ತಾನ ವಿರುದ್ಧ 9ರಲ್ಲಿ 8 ಗೆಲುವು
  • ಹಾಂಗ್ ಕಾಂಗ್ ಹಾಗೂ ಯುಎಇ ವಿರುದ್ಧ ತಲಾ ಒಂದು ಪಂದ್ಯ – ಎರಡೂ ಗೆದ್ದಿದೆ
  • ಓಮನ್ ವಿರುದ್ಧ ಇನ್ನೂ ಯಾವುದೇ ಪಂದ್ಯ ಇಲ್ಲ

ಏಷ್ಯಾಕಪ್‌ನಲ್ಲಿ ಭಾರತದ ಸಾಧನೆ

  • ಭಾರತ ಈಗಾಗಲೇ 8 ಬಾರಿ ಏಷ್ಯಾಕಪ್ ಗೆದ್ದಿದೆ – (7 ಏಕದಿನ, 1 ಟಿ20).
  • ಶ್ರೀಲಂಕಾ – 6 ಪ್ರಶಸ್ತಿ
  • ಪಾಕಿಸ್ತಾನ – 2 ಪ್ರಶಸ್ತಿ

2023ರಲ್ಲಿ ಫೈನಲ್‌ನಲ್ಲಿ ಭಾರತ ಸುಲಭವಾಗಿ ಶ್ರೀಲಂಕಾವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page