ಏಷ್ಯಾಕಪ್ 2025 (Asia Cup) ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಈ ಟೂರ್ನಿಯು ಸೆಪ್ಟೆಂಬರ್ 10ರಿಂದ ಆರಂಭವಾಗುವಂತೆ ಯೋಜನೆ ರೂಪಿಸುತ್ತಿದೆ. ಈ ಬಾರಿ ಭಾರತ ಆತಿಥ್ಯ ಒದಗಿಸಲಿದೆ, ಆದರೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆ ಇದೆ.
ಭಾಗವಹಿಸಬಹುದಾದ ತಂಡಗಳು
- ಭಾರತ
- ಪಾಕಿಸ್ತಾನ
- ಬಾಂಗ್ಲಾದೇಶ
- ಅಫ್ಘಾನಿಸ್ತಾನ
- ಶ್ರೀಲಂಕಾ
- ಯುಎಇ
ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಮೇಲೆ ಭಾರತ ದಾಳಿ ನಡೆಸಿದ ಹಿನ್ನೆಲೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯುವುದೆಂಬ ಪ್ರಶ್ನೆ ಮೂಡಿದೆ. ಕೆಲ ವರದಿಗಳ ಪ್ರಕಾರ, ಭಾರತ ಪಾಕಿಸ್ತಾನ ವಿರುದ್ಧದ ಪಂದ್ಯವನ್ನೇ ಆಡಲು ನಿರಾಕರಿಸಿದೆ ಎಂಬ ಸುದ್ದಿ ಇತ್ತು. ಆದರೆ ಈಗ ಬಂದ ಹೊಸ ಮಾಹಿತಿ ಪ್ರಕಾರ, ಎರಡೂ ತಂಡಗಳು ಮುಖಾಮುಖಿ ಆಗುವ ಸಾಧ್ಯತೆ ಇದ್ದೇ ಇದೆ.
ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಈ ಕುರಿತು ಇನ್ನೂ ದೃಢವಾದ ಮಾಹಿತಿ ಇಲ್ಲ. ಒಂದು ವೇಳೆ ಪಂದ್ಯ ನಡೆಯುವದಾದರೆ, ಅದು ತಟಸ್ಥ ನಾಡಿನಲ್ಲಿ (ನ್ಯೂಟ್ರಲ್ ವೆನ್ಯೂ) ನಡೆಯುವುದು ನಿಶ್ಚಿತ. ಈ ಬಗ್ಗೆ ಸಂಪೂರ್ಣ ವಿವರ ಜುಲೈ ಮೊದಲ ವಾರದಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.