
ಆಸ್ಟನ್ ಮಾರ್ಟಿನ್ ತನ್ನ (Aston Martin Vanquish) ಮೂರನೇ ತಲೆಮಾರಿನ “Vanquish” ಕಾರನ್ನು ಭಾರತದಲ್ಲಿ ಪರಿಚಯಿಸಿದೆ. ಇದರ ಆರಂಭಿಕ ಬೆಲೆ ₹8.85 ಕೋಟಿ (ಎಕ್ಸ್ ಶೋ ರೂಂ). ಈ ಕಾರು ಶಕ್ತಿಶಾಲಿ ದಹನಕಾರಿ ಎಂಜಿನ್ ಹೊಂದಿರುವ ರೋಡ್ ಓರಿಯೆಂಟೆಡ್ ಜಿಟಿ ಮಾದರಿಯದು.
ವಿನ್ಯಾಸ ವೈಶಿಷ್ಟ್ಯಗಳು
- ದೊಡ್ಡ veined grille, ಹೆಚ್ಚು ಗಾಳಿ ಹರಿಯುವಂತೆ ವಿನ್ಯಾಸ.
- V12 ಎಂಜಿನ್ ಶಕ್ತಿಯನ್ನು ಹೆಚ್ಚಿಸಲು 2 ಫಿನ್ ಆಕಾರದ ಬಾನೆಟ್ ಸ್ಕೂಪ್.
- ಸ್ವೆಪ್ಟ್‌ಬ್ಯಾಕ್ LED headlights ಮತ್ತು ಹಿಂಭಾಗದಲ್ಲಿ ವಿಶೇಷ ಪ್ಯಾಟರ್ನ್.
- 21-ಇಂಚಿನ ಫೋರ್ಜ್ಡ್ ವೀಲ್ಸ್, ಕಸ್ಟಮ್ ಪಿರೆಲಿ ಟೈರ್.
- ಕ್ವಾಡ್ ಎಕ್ಸಾಸ್ಟ್ ಟಿಪ್ಸ್ ಮತ್ತು ಸುಧಾರಿತ ರೂಫ್ ಲೈನ್.
ಇಂಟೀರಿಯರ್ ಹೈಲೈಟ್ಸ್
- 10.25-ಇಂಚಿನ ಟಚ್‌ಸ್ಕ್ರೀನ್ dashboard.
- ಆಪಲ್ ಕಾರ್ಪ್ಲೇ (ವೈರ್ಲೆಸ್) ಮತ್ತು ಆಂಡ್ರಾಯ್ಡ್ ಆಟೋ (ವೈರ್ಡ್) ಬೆಂಬಲ.
- 15-ಸ್ಪೀಕರ್ ಬೋವರ್ಸ್ & ವಿಲ್ಕಿನ್ಸ್ ಸೌಂಡ್ ಸಿಸ್ಟಮ್.
- ಸ್ಥಿರ ಗಾಜಿನ roof ನೊಂದಿಗೆ ಲಭ್ಯ, ಕಾರ್ಬನ್ ಫೈಬರ್ ಆಯ್ಕೆಯು ಸಹ ಇದೆ.
ಎಂಜಿನ್ ಮತ್ತು ಪರ್ಫಾರ್ಮೆನ್ಸ್
- 5.2-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್ (ಹಳೆಯ 6.0L ಎಂಜಿನ್ ಬದಲಿಗೆ).
- 823.5bhp ಪವರ್, 1,000Nm ಟಾರ್ಕ್ ಸಾಮರ್ಥ್ಯ.
- 0-100 ಕಿಮೀ ವೇಗವನ್ನು 3.3 ಸೆಕೆಂಡುಗಳಲ್ಲಿ ತಲುಪುತ್ತದೆ.
ಗರಿಷ್ಠ ವೇಗ 345 ಕಿಮೀ/ಗಂ. ಭಾರತೀಯ ಸೊಗಡಿಗೆ ಹೊಂದಿಕೊಂಡಿರುವ ಆಸ್ಟನ್ ಮಾರ್ಟಿನ್ Vanquish ಕಾರು ಐಷಾರಾಮಿ ಮತ್ತು ಪರ್ಫಾರ್ಮೆನ್ಸ್ ಪ್ರಿಯರಿಗೆ ಮೆಚ್ಚುಗೆಯಾಗಲಿದೆ!