BBMP ಆಸ್ತಿ ತೆರಿಗೆ ಪಾವತಿಗೆ ಇಂದು (ಮಾರ್ಚ್ 31) ಕೊನೆಯ ದಿನವಾಗಿದೆ. ಇಂದು ತೆರಿಗೆ ಪಾವತಿಸದಿದ್ದರೆ, ನಾಳೆಯಿಂದ (ಏಪ್ರಿಲ್ 1) ದುಪ್ಪಟ್ಟು ತೆರಿಗೆ ಹಾಗೂ ಶೇ 9 ರ ಬಡ್ಡಿ ಪಾವತಿಸಬೇಕಾಗುತ್ತದೆ.
ತೆರಿಗೆ ಪಾವತಿ ಮಾಡಲು ಅವಕಾಶ ನೀಡುವಂತೆ BBMP ಕಂದಾಯ ಇಲಾಖೆ ಇಂದು ರಾತ್ರಿ 11 ರವರೆಗೆ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದ ರಂಜಾನ್ ರಜೆಯನ್ನು ರದ್ದುಗೊಳಿಸಲಾಗಿದೆ.
ಮಾರ್ಚ್ 31ರೊಳಗೆ ತೆರಿಗೆ ಪಾವತಿಸದಿದ್ದರೆ, ಏಪ್ರಿಲ್ 1ರಿಂದ ಎರಡು ಹಂತಗಳಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. 2022-23 ಅಥವಾ ಅದಕ್ಕೂ ಮುಂಚಿನ ತೆರಿಗೆ ಬಾಕಿಗೆ ಶೇ 9ರ ಬಡ್ಡಿ, 2023-24 ಹಾಗೂ 2024-25 ಹಣಕಾಸು ವರ್ಷದ ಬಾಕಿಗೆ ಶೇ 15ರ ಬಡ್ಡಿ ವಿಧಿಸಲಾಗುತ್ತದೆ.
400 ಕೋಟಿ ರೂ. ತೆರಿಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗಾಗಲೇ ಕಠಿಣ ಕ್ರಮ ಕೈಗೊಂಡಿದೆ. ತೆರಿಗೆ ಪಾವತಿಸದಿದ್ದರೆ ಆಸ್ತಿಗಳನ್ನು ಹರಾಜು ಮಾಡುವ ಸಾಧ್ಯತೆಯೂ ಇದೆ.