Sullia, Dakshina Kannada : ಸುಳ್ಳ್ಯದ BJP ಯುವ ಮೋರ್ಚಾ ಮುಖಂಡ ಪ್ರವೀಣ್ (32) (Praveen Nettaru) ರನ್ನು ದುಷ್ಕರ್ಮಿಗಳು ಸುಳ್ಯ ತಾಲೂಕಿನ ಬೆಳ್ಳಾರೆ (Bellare) ಸಮೀಪದ ನೆಟ್ಟಾರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder) ಮಾಡಿದ್ದಾರೆ.
ಚಿಕನ್ ಅಂಗಡಿಯ ಮಾಲೀಕನಾಗಿದ್ದ ಪ್ರವೀಣ್ ನೆಟ್ಟಾರು ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಪ್ರವೀಣ್ ರ ಹತ್ಯೆ ಖಂಡಿಸಿ ಪುತ್ತೂರು (Puttur), ಬೆಳ್ಳಾರೆ, ಸುಳ್ಯ, ಕಡಬ (Kadaba) ಪಟ್ಟಣಗಳಲ್ಲಿ ಸ್ವಯಂಘೋಷಿತ ಬಂದ್ಗೆ ಹಿಂದುತ್ವ ಪರ ಸಂಘಟನೆಗಳು ಕರೆ ನೀಡಿವೆ. ಹಂತಕರಿಗಾಗಿ ಪೊಲೀಸರು (Police) ಶೋಧಿಸುತ್ತಿದ್ದಾರೆ.
ಮೃತರ ಆತ್ಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai), ಪ್ರಮೋದ್ ಮುತಾಲಿಕ್ (Pramod Muthalik), ಶೋಭ ಕರಂದ್ಲಾಜೆ (Shobha Karandlaje) ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.