Sunday, May 19, 2024
HomeKarnatakaChikkaballapuraಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ಜಾತ್ರೆ

ಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ಜಾತ್ರೆ

Chikkaballapur : ಚಿಕ್ಕಬಳ್ಳಾಪುರನಗರದ ಹೊರ ವಲಯದ ಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ಜಾತ್ರೆ (Chitravati Sri Subramanya Swamy Temple Jathre) ಭಾನುವಾರ Covid-19 ಕಾರಣ ನಿರ್ಬಂಧ ವಿಧಿಸಲಾಗಿದ್ದರಿಂದ ಈ ಬಾರಿ ಸರಳವಾಗಿ ನಡೆಯಿತು.

ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ರುದ್ರಾಭಿಷೇಕ, ಅಂಕುರಾರ್ಪಣೆ, ಪಾರ್ವಾಟೋತ್ಸವ, ವಸಂತೋತ್ಸವ, ಉಯಾಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ನಿರ್ಬಂಧದದ ಕಾರಣ ಭಕ್ತರ ಸಂಖ್ಯೆ ಕಡಿಮೆ ಇತ್ತು. ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನಕ್ಕೆ ಬಂದರು. ದೇಗುಲದ ಬಳಿಯಿರುವ ಹುತ್ತಕ್ಕೆ ಪೂಜೆ ಸಲ್ಲಿಸಿದರು. ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ರಥೋತ್ಸವ ನಡೆಯದ ಕಾರಣ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಭಕ್ತರು ದೇಗುಲದ ಆವರಣದಲ್ಲಿ ಕಂಡು ಬಂದರು.

ಒಂದು ವಾರದ ಕಾಲ ನಡೆಯುತ್ತಿದ್ದ ದನಗಳ ಸಂತೆಗೂ ಸಹ ಈ ಬಾರಿ ನಿರ್ಬಂಧ ಹೇರಿದ್ದರಿಂದ ದನಗಳ ಸಂಖ್ಯೆ ಕಡಿಮೆ ಇತ್ತು.

 

- Advertisement -

For Daily Updates WhatsApp ‘HI’ to 7406303366

RELATED ARTICLES
- Advertisment -

Most Popular

Karnataka

India

You cannot copy content of this page