Saturday, June 10, 2023
HomeKarnatakaChikkaballapuraCovid-19 ಹಾಗೂ ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ

Covid-19 ಹಾಗೂ ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ

Chikkaballpur : Covid-19 ಮತ್ತು ಅತಿವೃಷ್ಟಿಗಳಿಂದ ತೊಂದರೆಗೆ ಒಳಗಾದ ಸಂತ್ರಸ್ತ ಕುಟುಂಬಗಳಿಗೆ ಅನಾಥ ಪ್ರಜ್ಞೆ ಕಾಡದಂತೆ ಅವರ ಜೀವನಕ್ಕೆ ಆಸರೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೆರವಿನ ಹಸ್ತ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr. K. Sudhakar) ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿಯ (Sidlaghatta Taluk Belluti Village) SLV ಕಲ್ಯಾಣ ಮಂಟಪದಲ್ಲಿ ಗುರುವಾರ Covid-19 ನಿಂದ ಮೃತ ಪಟ್ಟ ಫಲಾನುಭವಿಗಳ ಕುಟುಂಬಸ್ಥರಿಗೆ ಹಾಗೂ ಮಳೆ ಹಾನಿಯಾದ ಸಂತ್ರಸ್ತರಿಗೆ ಪರಿಹಾರ ಧನದ ಚೆಕ್ ಹಾಗೂ ಮಂಜೂರಾತಿ ಪತ್ರಗಳ ವಿತರಣೆ ಮಾಡಿ ಅವರು ಮಾತನಾಡಿದರು.

ಇಡೀ ವಿಶ್ವವೇ ಸಾಮೂಹಿಕ ರೋಗದಿಂದ ತೊಂದರೆಗೆ ಒಳಗಾಗಿ ಅಪಾರ ಪ್ರಮಾಣದ ಜೀವ ಹಾನಿಯಾಯಿತು. ಇದರೊಂದಿಗೆ ಜಿಲ್ಲೆಯಲ್ಲಿ 50 ವರ್ಷಗಳಲ್ಲೆ ಕಂಡು ಕೇಳರಿಯದ ಮಳೆಯಿಂದ ಅಪಾರ ಹಾನಿಗೆ ಒಳಗಾದ ಜನರ ಕಷ್ಟಗಳಿಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರದ  ಪರಿಹಾರ ನೀಡುತ್ತಿದ್ದು ಕೇವಲ ಒಂದೆರಡು ತಿಂಗಳಲ್ಲೇ ಬೆಳೆ ಹಾನಿಗೆ ಒಳಗಾದ ರೈತರಿಗೂ ಪರಿಹಾರ ಧನವನ್ನು ನೀಡಲಾಗಿದೆ ಎಂದರು.

ತಾಲ್ಲೂಕಿನಲ್ಲಿ ಕೋವಿಡ್ ನಿಂದ ಮೃತಪಟ್ಟ 45 ಕುಟುಂಬದ ಸದಸ್ಯರಿಗೆ ತಲಾ 1 ಲಕ್ಷ ರೂ ಗಳು, 12 ಕುಟುಂಬಗಳಿಗೆ ತಲಾ 50 ಸಾವಿರ ರೂಗಳಂತೆ ಒಟ್ಟು 57 ಮಂದಿಗೆ ಚೆಕ್ ವಿತರಣೆ ಮಾಡಲಾಯಿತು.

- Advertisement -

ಬಾರಿ ಮಳೆಯಿಂದ ಹಾನಿಗೊಳಗಾದ ರೈತರಿಗೆ ಹಾಗೂ ಮಳೆಯಿಂದ ಹಾನಿಗೊಳಗಾದ ಕುಟುಂಬ ಗಳಿಗೆ ಪರಿಹಾರ ಧನದ ಚೆಕ್ ಗಳನ್ನು ವಿತರಿಸಲಾಯಿತು. ಮಳೆಗೆ ಮನೆ ಹಾನಿಯಾದವರಿಗೆ A ವಿಭಾಗದವರಿಗೆ 5 ಲಕ್ಷ , B ವಿಭಾಗದವರಿಗೆ 3 ಲಕ್ಷ, C ವಿಭಾಗಕ್ಕೆ 50 ಸಾವಿರದಂತೆ 389 ಜನಕ್ಕೆ 3 ಕೋಟಿ 16 ಲಕ್ಷ ಪರಿಹಾರ ನೀಡುತ್ತಿರುವುದಾಗಿ ಹೇಳಿದರು.

ಸಂಸದ ಮುನಿಸ್ವಾಮಿ ಮಾತನಾಡಿ, ದಕ್ಷ ಮತ್ತು ಪ್ರಾಮಾಣಿಕ ಪ್ರಧಾನಿಗಳ ಸತತ ಶ್ರಮದಿಂದ ದೇಶದ ವಿಜ್ಞಾನಿಗಳು ಪಟ್ಟ ಶ್ರಮದಿಂದ ಕೋವಿಡ್ ನಿಯಂತ್ರಣ ಮಾಡಲಾಯಿತು. ಇಡೀ ರಾಷ್ಟ್ರದಲ್ಲೇ ರಾಜ್ಯದಲ್ಲಿ ಅತ್ಯಧಿಕ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗಿದೆ. ಪರಿಹಾರ ಧನದಲ್ಲಿ ಸೋರಿಕೆ ಯಾಗದಂತೆ ದಳ್ಳಾಳಿಗಳ ಹಾವಳಿ ತಡೆದು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಪರಿಹಾದ ಧನವನ್ನು ಕೊಡಲಾಗಿದೆ ಎಂದರು.

ಶಾಸಕ ವಿ ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿನ ಹಸ್ತ ನೀಡಿರುವುದನ್ನು ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.

ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha), ತಹಶೀಲ್ದಾರ್ ಬಿ.ಎಸ್.ರಾಜೀವ್ (Tahsildar B. S. Rajiv), ಕಾರ್ಯ ನಿರ್ವಹಣಾಧಿಕಾರಿ ಚಂದ್ರಕಾಂತ್, ಪೌರಾಯುಕ್ತ ಶ್ರೀಕಾಂತ್,  ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಬೆಳ್ಳೂಟಿ ಸಂತೋಷ್, ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ನೇತ್ರಾವತಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page