back to top
28.2 C
Bengaluru
Saturday, August 30, 2025
HomeKarnatakaChikkaballapuraಚಿಕ್ಕಬಳ್ಳಾಪುರ ಜಿಲ್ಲೆಯ CRPF ಯೋಧ ನಾಗಾಲ್ಯಾಂಡ್ ನಲ್ಲಿ ಮೃತ

ಚಿಕ್ಕಬಳ್ಳಾಪುರ ಜಿಲ್ಲೆಯ CRPF ಯೋಧ ನಾಗಾಲ್ಯಾಂಡ್ ನಲ್ಲಿ ಮೃತ

- Advertisement -
- Advertisement -

Chikkaballapur : ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಾಗಾಲ್ಯಾಂಡ್ (Nagaland) ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು (Gauribidanur) ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ತರಿದಾಳು ಗ್ರಾಮದ ಯೋಧರಾದ (Soldier) ಟಿ.ಜಿ.ಸತೀಶ್ ಭಾನುವಾರ ಬೆಳಿಗ್ಗೆ ಸುಮಾರು 5.30ರ ಸಮಯದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಟಿ.ಜಿ.ಸತೀಶ್ ನಾಗಾಲ್ಯಾಂಡ್, ಛತ್ತೀಸ್‌ಘಡ ಹಾಗೂ ಬೆಳಗಾಂನ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸಿದ್ದರು. ಮೃತಯೋಧ ಟಿ.ಜಿ.ಸತೀಶ್ ಅವರು 8 ವರ್ಷದ ಮಗಳು ಮೋನಿಕಾ, 5 ವರ್ಷದ ಮಗ ಉಜ್ವಲ್ ಹಾಗೂ ಪತ್ನಿ ಭವ್ಯ, ತಂದೆ ಗಂಗಾಧರಪ್ಪ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸೋಮವಾರ ಸಂಜೆ ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ಹೋಬಳಿಯ ತರಿದಾಳು ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಅಂತ್ಯಕ್ರಿಯೆಯಲ್ಲಿ ಸಚಿವರಾದ ಡಾ.ಕೆ.ಸುಧಾಕರ್ (Dr. K Sudhakar), ಸ್ಥಳೀಯ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ (Deputy Commissioner R Latha), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ (Superintendent of Police G. K. Mithun Kumar), ಡಿವೈಎಸ್‌ಪಿ ವಾಸುದೇವ್, ತಹಶೀಲ್ದಾರ್ ಎಚ್.ಶ್ರೀನಿವಾಸ್, ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ, ಕೆ.ಎಚ್.ಪುಟ್ಟಸ್ವಾಮಿಗೌಡ, ಬಿ.ಜಿ.ವೇಣುಗೋಪಾಲರೆಡ್ಡಿ ಪಾಲ್ಗೊಂಡಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page