back to top
26.5 C
Bengaluru
Tuesday, July 15, 2025
HomeIndiaSikkim Landslide: ಸೈನಿಕನ ಶವ ಪತ್ತೆ, 48 ಮಂದಿ ವಿಮಾನ ಮೂಲಕ ರಕ್ಷಣೆ

Sikkim Landslide: ಸೈನಿಕನ ಶವ ಪತ್ತೆ, 48 ಮಂದಿ ವಿಮಾನ ಮೂಲಕ ರಕ್ಷಣೆ

- Advertisement -
- Advertisement -

Gangtok, Sikkim: ಉತ್ತರ ಸಿಕ್ಕಿಂನಲ್ಲಿ ನಡೆದ ಭೂಕುಸಿತದಿಂದ (Sikkim landslide) ನಾಪತ್ತೆಯಾಗಿದ್ದ ಸೈನಿಕನ ಶವ ಎಂಟು ದಿನಗಳ ನಂತರ ಪತ್ತೆಯಾಗಿದೆ. ಭಾರತೀಯ ಸೇನೆ ಮತ್ತು NDRF ತಂಡ ಶವವನ್ನು ಚಾಟೆನ್ ಪ್ರದೇಶದಲ್ಲಿ ಹುಡುಕಿ ಪಡೆದುಕೊಂಡಿದೆ. ಈ ದುರ್ಘಟನೆಯಲ್ಲಿ ಇನ್ನೂ ಐದು ಜನರು ಕಾಣೆಯಾಗಿದ್ದಾರೆ.

ಜೂನ್ 1ರಂದು ಉತ್ತರ ಸಿಕ್ಕಿಂನಲ್ಲಿ ಬಿರುಸಿನ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ, ಸೇನೆಗೆ ಸೇರಿದ ಶಿಬಿರಗಳು ಸಹ ಹಾನಿಗೊಂಡಿದ್ದವು. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಭಾರತೀಯ ವಾಯುಪಡೆ ಮತ್ತು NDRF ತಂಡಗಳು ಸ್ಥಳೀಯರು ಮತ್ತು ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ.

ಇಲ್ಲಿಯವರೆಗೆ ಸುಮಾರು 2000 ಜನರನ್ನು ರಕ್ಷಣೆ ಮಾಡಲಾಗಿದೆ. airlift ಮೂಲಕ 48 ಜನರನ್ನು ರಕ್ಷಿಸಲಾಗಿದೆ. ಇವರಲ್ಲಿ 20 ಮಂದಿ ಸೇನಾ ಸಿಬ್ಬಂದಿ ಹಾಗೂ ಉಳಿದ 28 ಜನರು ಸ್ಥಳೀಯರು ಮತ್ತು ಚಾಲಕರಾಗಿದ್ದಾರೆ. ಮೂವರು ಮಕ್ಕಳನ್ನೂ ಸೇರಿಸಿ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಭದ್ರತೆಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಸಿಕ್ಕಿಂ ಸರ್ಕಾರ ಎಲ್ಲಾ ರಸ್ತೆಗಳನ್ನು ಪುನರ್ ಸ್ಥಾಪನೆ ಮಾಡಲಿದ್ದಾರೆ. ಪಡಿತರ ಮತ್ತು ವಿದ್ಯುತ್ ಸೇವೆಗಳ ಪುನರ್ ಸ್ಥಾಪನೆ ಕಾರ್ಯವೂ ಪ್ರಗತಿಪಥದಲ್ಲಿದೆ ಎಂದು ಮಂಗನ್ ಜಿಲ್ಲೆಯ ಡಿಸಿ ಅನಂತ್ ಜೈನ್ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page