Sidlaghatta, Chikkaballapur : ಯುವಕನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ (Seegehalli Village, Sidlaghatta Taluk) ಮಂಗಳವಾರ ನಡೆದಿದೆ. ಶೀಗೆಹಳ್ಳಿ ಗ್ರಾಮದ ಮೋಹನ್ (28) ಎಂಬ ಯುವಕ ಕೊಲೆಯಾಗಿದ್ದು (Murder), ಸ್ನೇಹಿತರೇ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳವಾರ ಮೋಹನ್ ಮೋಜಿಗೆಂದು ಸ್ನೇಹಿತರಾದ ಪ್ರಭಾಕರ್, ಸುಮನ್, ನಂದನ್ ಜೊತೆ ತೆರಳಿದ್ದು, ಶೀಗೆಹಳ್ಳಿ ಹಾಗೂ ಗೆಜ್ಜಿಗಾನಹಳ್ಳಿಯ ಮಾರ್ಗಮಧ್ಯೆ ಇರುವ ನಿಲಗಿರಿ ತೋಪಿನಲ್ಲಿ ಕಾಲಹರಣ ಮಾಡುತ್ತಿದ್ದ ಸಮಯದಲ್ಲಿ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಮೋಹನ್ ನನ್ನು ಆತನ ಸ್ನೇಹಿತರು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು (Sidlaghatta Rural Police), ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೊಲೆಯ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.