Delhi: ದೇಶದ ಅನೇಕ ಭಾಗಗಳಲ್ಲಿ ಕೊರೊನಾ ವೈರಸ್ (COVID-19,Coronavirus) ಭೀತಿ ಮತ್ತೆ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 276 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 7 ಜನರ ಸಾವು ದಾಖಲಾಗಿದೆ.
ದೇಶದ ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳು ಈಗ 4,302 ಕ್ಕೆ ಏರಿವೆ. ದೆಹಲಿ ಮತ್ತು ಗುಜರಾತ್ನಲ್ಲಿ 64 ಹೊಸ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ 63 ಮತ್ತು ಪಶ್ಚಿಮ ಬಂಗಾಳದಲ್ಲಿ 60 ಜನರು ಕೋವಿಡ್ ಪಾಸಿಟಿವ್ ಆಗಿದ್ದಾರೆ.
ಈವರೆಗೆ ಕೇರಳದಲ್ಲಿ 1,373 ಜನರು ಸೋಂಕಿತರಾಗಿದ್ದು, ಮಹಾರಾಷ್ಟ್ರ 510, ದೆಹಲಿ 457 ಮತ್ತು ಉತ್ತರ ಪ್ರದೇಶ 201 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿವೆ.
ಒಟ್ಟು 44 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 7 ಸಾವುಗಳು ದಾಖಲಾಗಿವೆ, ಅವುಗಳಲ್ಲಿ 2 ಸಾವು ಮಹಾರಾಷ್ಟ್ರದಲ್ಲಿ ಸಂಭವಿಸಿದ್ದು, ಈ ವರ್ಷ 14 ಸಾವುಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಈ ಸಾವುಗಳಲ್ಲಿ ಕೆಲವರಿಗೆ ದೀರ್ಘಕಾಲದ ಉಸಿರಾಟದ ಸಮಸ್ಯೆಗಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿದ್ದವು.
ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿರುವುದು ಒಳ್ಳೆಯದಾಗಿದೆ. ಮಹಾರಾಷ್ಟ್ರದಲ್ಲಿ ಇನ್ನು 510 ಸಕ್ರಿಯ ಪ್ರಕರಣಗಳಿವೆ. ರಾಜ್ಯಗಳಲ್ಲಿ ಕಳೆದ ದಿನ 86 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು ಜಾಗರೂಕತೆಯನ್ನೂ ಹೆಚ್ಚಿಸಿದೆ.