ಬಂಗಾಳ ಕೊಲ್ಲಿಯಲ್ಲಿ(Bay of Bengal) ಮತ್ತೆ ಹೊಸದೊಂದು ಚಂಡಮಾರುತ ರೂಪುಗೊಂಡಿದ್ದು ಇದಕ್ಕೆ ಸೈಕ್ಲೋನ್ ಡಾನಾ (Cyclone Dana) ಎಂದು ಹೆಸರಿಡಲಾಗಿದೆ. ಡಾನಾ ಚಂಡಮಾರುತದ ಆರ್ಭಟದಿಂದಾಗಿ ನೈಋತ್ಯ ಬಂಗಾಳದಿಂದ ದಕ್ಷಿಣ ಭಾರತದವರೆಗೆ ಧಾರಾಕಾರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ.
ಡಾನಾ ಚಂಡಮಾರುತವು ಅಕ್ಟೋಬರ್ 24 ಮತ್ತು 26 ರ ನಡುವೆ ಭಾರತದ ಕರಾವಳಿಯನ್ನು ಅಪ್ಪಳಿಸಬಹುದು. ಇದರಿಂದ ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಭಾಗದಲ್ಲಿ ಹೆಚ್ಚು ಪರಿಣಾಮ ಬೀರಲಿದ್ದು, ಆ ಭಾಗದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶ ಹಾಗೂ ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ.
ತಮಿಳುನಾಡು, ಕೇರಳ, ದಕ್ಷಿಣ ಒಳ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಈಶಾನ್ಯ ಭಾರತ ಮತ್ತು ಜಾರ್ಖಂಡ್ ಮತ್ತು ಬಿಹಾರದ ಕೆಲವು ಭಾಗಗಳಲ್ಲಿಯೂ ಮಳೆ ಕಾಣಿಸಿಕೊಂಡಿದೆ.
ಸಿಕ್ಕಿಂ, ಈಶಾನ್ಯ ಭಾರತ, ಛತ್ತೀಸ್ಗಢದ ಕೆಲವು ಭಾಗಗಳು, ಮಧ್ಯಪ್ರದೇಶ, ಉತ್ತರಾಖಂಡ, ವಿದರ್ಭ ಮತ್ತು ದಕ್ಷಿಣ ಗುಜರಾತ್ನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ಬಂಗಾಳಕೊಲ್ಲಿಯಲ್ಲಿ ಹುಟ್ಟಿಕೊಂಡಿರುವ ಡಾನಾ ಚಂಡಮಾರುತ ಭಾರತದ ಗಡಿ ದಾಟಿ ಅರಬ್ಬಿ ಸಮುದ್ರವನ್ನು ತಲುಪಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆ ಅಥವಾ ಇತರೆ ಚಟುವಟಿಕೆಗಳಿಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಇನ್ನು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಮುಂಇದನ 24 ಗಂಟೆಗಳಲ್ಲಿ ಮಳೆಯಾಗಲಿದ್ದು, ಅತ್ತ ಸಕಲೇಶಪುರ, ಶಿವಮೊಗಗ್, ಮೈಸೂರು ಭಾಗದಲ್ಲೂ ಮಳೆಯಾಗಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣ ಇದೆ. ನಿನ್ನೆ ರಾತ್ರಿಯೂ ಬೆಂಗಳೂರಿನಲ್ಲಿ ಮಳೆ ಸುರಿದಿದ್ದು, ಸದ್ಯ ವಾತಾವರಣ ತಂಪಾಗಿದೆ.