back to top
16 C
Bengaluru
Monday, December 15, 2025
HomeKarnatakaUttara Kannadaಕಾಳಿ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು

ಕಾಳಿ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು

- Advertisement -
- Advertisement -

Dandeli, Uttara Kannada : ದಾಂಡೇಲಿಯ ಮೌಳಂಗಿ ಇಕೊ ಪಾರ್ಕ್ (Moulangi Eco Park) ಬಳಿ ಕಾಳಿ ನದಿಯಲ್ಲಿ (Kali River) ಈಜಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಯುವಕ ಹುಬ್ಬಳ್ಳಿ ಶೀಲಾ ಕಾಲೊನಿ ನಿವಾಸಿ ಆನಂದ ಸಿಂಗ್ ಲಕ್ಷ್ಮಣ ಸಿಂಗ್ ರ ಮೃತದೇಹ ಶುಕ್ರವಾರ ಚಿಕ್ಕ ಸಂಗಮದಲ್ಲಿ ಪತ್ತೆಯಾಗಿದೆ.

ಸತತ ಎರಡು ದಿನ ಶೋಧ ಕಾರ್ಯ ನಡೆಸಿದ ದಾಂಡೇಲಿ ಮಾನಸಾ ಅಡ್ವೆಂಚರ್ ತಂಡ ಹಾಗೂ ಜೊಯಿಡಾ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಮೃತ ದೇಹವನ್ನು ಒಪ್ಪಿಸಲಾಗಿದ್ದು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆ ಪಿ.ಎಸ್‌.ಐ ಐ.ಆರ್.ಗಡ್ಡೇಕರ, ಯಲ್ಲಾಲಿಂಗ ಕೊಣ್ಣೂರು ಹಾಗೂ ಇತರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page