Bhatkal, Uttara Kannada : ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘದಿಂದ MES ಕಿಡಿಗೇಡಿಗಳ ದೌರ್ಜನ್ಯ ವಿರೋಧಿಸಿ ಮಂಗಳವಾರ ಉಪವಿಭಾಗಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುವ ವೇಳೆ ಎಂಇಎಸ್ ಸಂಘಟನೆಯ ಕಿಡಿಗೇಡಿಗಳು ಅಧಿವೇಶನದ ವಿರುದ್ಧ ಮಹಾಮೇಳ ಮಾಡಲು ಹೊರಟು ಗಲಭೆ ಎಬ್ಬಿಸಿದ್ದಾರೆ. ಗಲಭೆಯಲ್ಲಿ ಕನ್ನಡದ ಬಾವುಟವನ್ನು ಸುಟ್ಟು ಹಾಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ. ಕನ್ನಡಿಗರ ಅಂಗಡಿ, ಹೋಟೆಲ್, ಸಾರಿಗೆ ಬಸ್‌ಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು. ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಿಸಿದ ಎಲ್ಲ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದರು.
ಉಪವಿಭಾಗಾಧಿಕಾರಿ ಮಮತಾ ದೇವಿಯವರ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ್ ಸಂತೋಷ ಭಂಢಾರಿ ಮನವಿ ಸ್ವೀಕರಿಸಿದರು.
ಸಂಘದ ಅಧ್ಯಕ್ಷ ರಮೇಶ ನಾಯ್ಕ, ಕಾರ್ಯದರ್ಶಿ ಪಾಂಡುರಂಗ ನಾಯ್ಕ, ಸದಸ್ಯರಾದ ಪ್ರಕಾಶ ನಾಯ್ಕ, ಶ್ರೀಕಾಂತ ನಾಯ್ಕ, ವಸಂತ. ನಾಯ್ಕ, ಈಶ್ವರ ನಾಯ್ಕ, ಪ್ರಶಾಂತ ನಾಯ್ಕ ಕೋಕ್ತಿ, ಶ್ರೀನಿವಾಸ ಹನುಮಾನ್ ನಗರ ಉಪಸ್ಥಿತರಿದ್ದರು.