ನಾನ್-ಸ್ಟಿಕ್ ಕುಕ್‌ವೇರ್ (Non-stick cookware) ಅಥವಾ ಪ್ಯಾನ್‌ಗಳನ್ನು ಬಹುಮಟ್ಟಿಗೆ ಬಳಸಲಾಗುತ್ತದೆ, ಆದರೆ ಇವುಗಳನ್ನು ಅತಿಯಾಗಿ ಬಿಸಿ ಮಾಡಿದರೆ ಹಾನಿ ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಟೆಫ್ಲಾನ್ (Teflon) ಲೇಪಿತ ಪ್ಯಾನ್‌ಗಳಲ್ಲಿ ಕೆಲವು ರಾಸಾಯನಿಕಗಳು ಬಿಸಿಯಾದಾಗ ಗಾಳಿಯಲ್ಲಿ ಮುಕ್ತವಾಗುತ್ತವೆ, ಇದು “ಟೆಫ್ಲಾನ್ ಫ್ಲೂ” ಅಥವಾ ಜ್ವರದಂತಹ ಲಕ್ಷಣಗಳಿಗೆ ಕಾರಣವಾಗಬಹುದು.
ನಾನ್-ಸ್ಟಿಕ್ ಪ್ಯಾನ್‌ಗಳನ್ನು ಹೆಚ್ಚಿದ ತಾಪಮಾನದಲ್ಲಿ ಬಳಕೆ ಮಾಡುವುದರಿಂದ ಆಲೂಮಿನಿಯಮ್, ಟೆಫ್ಲಾನ್ ಲೇಪನವು ಹದಗೆಡಬಹುದು ಮತ್ತು ವಿಷಕಾರಿ ಹೊಗೆ ಹೊರಹೊಮ್ಮಬಹುದು. ಈ ಹೊಗೆಗಳನ್ನು ಉಸಿರಾಡಿದರೆ ತಲೆನೋವು, ಶೀತ, ಜ್ವರ, ಎದೆಯ ಬಿಗಿತ, ಕೆಮ್ಮು ಮತ್ತು ಗಂಟಲು ನೋವು ಮುಂತಾದ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
ಇವು ನೈಸರ್ಗಿಕ ಉಸಿರಾಟ ಸಂಬಂಧಿತ ಕಾಯಿಲೆಗಳಂತೆ ಕಾಣಬಹುದು ಮತ್ತು ತಪ್ಪಾದ ರೋಗನಿರ್ಣಯಕ್ಕೆ ಕಾರಣವಾಗಬಹುದು. ಕೆಲವೊಮ್ಮೆ, ನಾನ್‌ಸ್ಟಿಕ್ ಕುಕ್‌ವೇರ್ ಅನ್ನು ಅತಿಯಾಗಿ ಬಿಸಿ ಮಾಡುವುದು ಅಥವಾ ಪ್ಯಾನ್‌ಗಳನ್ನು ಸ್ಕ್ರಾಚಿಂಗ್ ಮಾಡುವುದರಿಂದ ಹೊರಬರುವ ಲೇಪನದಲ್ಲಿನ ರಾಸಾಯನಿಕಗಳು ಈ ಜ್ವರಕ್ಕೆ ಕಾರಣವಾಗಬಹುದು ಎಂದು, ಹೀಗಾಗಿ ಅವುಗಳನ್ನು ಬಳಕೆ ಮಾಡದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಅಪಾಯದಿಂದ ದೂರವಿರುವುದಕ್ಕಾಗಿ, ಸರಿಯಾದ ಗಾಳಿಯಾಟ ಮತ್ತು ಸರಿಯಾದ ಜಾಗ್ರತೆಯೊಂದಿಗೆ ಕುಕ್‌ವೇರ್ ಗಳನ್ನು ಬಳಸುವುದು ಅನಿವಾರ್ಯ. “ಸ್ಟೇನ್ಲೆಸ್ ಸ್ಟೀಲ್” ಅಥವಾ “ಕಬ್ಬಿಣ” ಪ್ಯಾನ್‌ಗಳ ಬಳಕೆ ಹೆಚ್ಚಿಸಲು ತಜ್ಞರು ಹೇಳಿದ್ದಾರೆ.