ಆಹಾರದಲ್ಲಿ ಕಲಬೆರಕೆ (Food Adulteration) ಮಾಡುವ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ಅನೇಕರು ಅದನ್ನು ಅವಗಣಿಸಿ ಪ್ರತಿದಿನವೂ ಉಪಯೋಗಿಸುತ್ತಾರೆ. ಇದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಕಲಬೆರಕೆಯೆಂಬುದನ್ನು ನಿಯಂತ್ರಿಸಲು ಭಾರತೀಯ ಸರ್ಕಾರ (Indian government) ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು (Food Safety and Standards Act) ಜಾರಿಗೆ ತರುತ್ತದೆ. ಕಲಬೆರಕೆ ಮಾಡುವವರಿಗೆ ಕಠಿಣ ಶಿಕ್ಷೆಗಳಿವೆ.
ಭಾರತದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಪ್ರಕಾರ, ಕಲಬೆರಕೆ ಮಾಡುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಹೀಗೆ ತಪ್ಪು ಮಾಡಿದರೆ, ಅದನ್ನು ಗಂಭೀರ ಅಪರಾಧವಾಗಿ ನೋಡಲಾಗುತ್ತದೆ. ತಪ್ಪಿತಸ್ಥನಿಗೆ ದಂಡ ವಿಧಿಸಲಾಗುತ್ತದೆ, ದಂಡ ಪ್ರಮಾಣ 1 ಲಕ್ಷ ರೂ.ವರೆಗೆ ಇರಬಹುದು. ಈ ಅಪರಾಧ ಗಂಭೀರವಾಗಿದ್ದರೆ, 6 ತಿಂಗಳುಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ, ಕಲಬೆರಕೆ ಮಾಡಿದ ಆಹಾರವನ್ನು ಸೇವಿಸಿದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ಪ್ರಕಾರ ಮೃತ್ಯು ಹೊಂದಿದರೆ ಜೀವಾವಧಿ ಅಥವಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.
ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದರ ಜೊತೆಗೆ ಆಹಾರದ ಆಯ್ಕೆಯು ಸಹ ತುಂಬಾ ಮುಖ್ಯವಾಗುತ್ತದೆ. ಕಲಬೆರಕೆ ಆಗದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ. ನೈಸರ್ಗಿಕ ಆಹಾರಗಳನ್ನು ಅಥವಾ ಹಣ್ಣು, ತರಕಾರಿ, ಸೇವಿಸಿ. ಮನೆಯಲ್ಲಿಯೇ ತಯಾರಿಸಿದ ಆಹಾರಗಳನ್ನು ಉಪಯೋಗಿಸಿ, ರೆಡಿಮೇಡ್ ತಿಂಡಿಗಳಿಂದ ದೂರವಿರಿ.