![India won the ODI India won the ODI](https://kannadatopnews.com/wp-content/uploads/2025/02/Photoshop_Online-news-copy-101.jpg)
ಭಾರತದಲ್ಲಿ ಇಂಗ್ಲೆಂಡ್ (England) ತಂಡಕ್ಕೆ ಏಕದಿನ ಸರಣಿ (ODI series) ಗೆದ್ದು 41 ವರ್ಷಗಳಾಗಿವೆ. ಕೊನೆಯ ಬಾರಿ ಇಂಗ್ಲೆಂಡ್ 1984ರಲ್ಲಿ ಭಾರತದಲ್ಲಿ ಏಕದಿನ ಸರಣಿ ಗೆದ್ದಿದ್ದು, 5 ಪಂದ್ಯಗಳ ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿತ್ತು.
ಆದರೆ, ಅದಾದ ಬಳಿಕ ಇಂಗ್ಲೆಂಡ್ ಯಾವುದೇ ಏಕದಿನ ಸರಣಿಯನ್ನು ಭಾರತದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಬಲಿಷ್ಠ ತಂಡದೊಂದಿಗೆ ಬಂದ ಇಂಗ್ಲೆಂಡ್ 40 ವರ್ಷಗಳ ನಿರೀಕ್ಷೆಗೆ ತೆರೆ ಎಳೆಯಲು ಪ್ರಯತ್ನಿಸಿತು. ಆದರೆ, ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, ಆಂಗ್ಲರ ಕನಸಿಗೆ ತಣ್ಣೀರೆರಚಿದೆ.
ಮೊದಲ ಏಕದಿನದಲ್ಲಿ ಭಾರತ 4 ವಿಕೆಟ್ ಗಳ ಗೆಲುವು ಸಾಧಿಸಿತು. ದ್ವಿತೀಯ ಪಂದ್ಯದಲ್ಲೂ 4 ವಿಕೆಟ್ ಗಳ ಗೆಲುವು ದಾಖಲಿಸಿ, ಸರಣಿಯನ್ನು ವಶಪಡಿಸಿಕೊಂಡಿತು. ಮೂರನೇ ಏಕದಿನ ಪಂದ್ಯವು ಫೆಬ್ರವರಿ 12 ರಂದು ನಡೆಯಲಿದ್ದು, ಟೀಮ್ ಇಂಡಿಯಾ ವೈಟ್ ವಾಶ್ ಮಾಡುವ ಉದ್ದೇಶದಲ್ಲಿದೆ. ಇಂಗ್ಲೆಂಡ್ ಕೊನೆಯ ಪಂದ್ಯದಲ್ಲಿ ಗೌರವ ಉಳಿಸಿಕೊಳ್ಳಬಹುದೇ ಎಂಬುದು ಕುತೂಹಲಕರವಾಗಿದೆ.