ಷೇರು ಮಾರುಕಟ್ಟೆಯಲ್ಲಿ (stock market) ಹೂಡಿಕೆ ಮಾಡಿದರೆ ಭಾರಿ ಆದಾಯ ಸಿಗುತ್ತದೆ ಎಂದು ಜನರನ್ನು ಯಾಮಾರಿಸುವ ಜಾಲವೊಂದನ್ನು ಬೇಧಿಸಿರುವ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.
ಈ ದಂಧೆಯಲ್ಲಿ ತೊಡಗಿದ್ದವರು ಆಕ್ಸಿಸ್ ಬ್ಯಾಂಕ್ ನ (Axis Bank) ಮ್ಯಾನೇಜರ್ (manager) ಮತ್ತು ಮೂವರು ಸೇಲ್ಸ್ ಎಕ್ಸಿಕ್ಯೂಟಿವ್ ಗಳು (sales executives) ಸೇರಿದಂತೆ ಎಂಟು ಜನ ಎನ್ನುವುದು ಆತಂಕಕಾರಿ ವಿಚಾರವಾಗಿದೆ.
ನಾಗರಭಾವಿ ಶಾಖೆಯಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದ್ದು, 97 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ತಿಳಿದುಬಂದಿದೆ. ಆಕ್ಸಿಸ್ ಬ್ಯಾಂಕ್ ನ ಉದ್ಯೋಗಿಗಳೇ ಈ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಆತಂಕಕ್ಕೆ ಕಾರಣವಾಗಿದೆ.
Online ವಂಚನೆಯಿಂದ ರಕ್ಷಣೆ
ಇತ್ತೀಚಿನ ದಿನಗಳಲ್ಲಿ online ವಂಚನೆಗಳು ಸಾಮಾನ್ಯ ಎನ್ನುವಂತಾಗಿದೆ. ಆದಾಯ ತೆರಿಗೆ ಇಲಾಖೆ, ಕಸ್ಟಮ್ಸ್ ಅಧಿಕಾರಿಗಳು ಎಂದುಕೊಂಡು ಕ್ರೆಡಿಟ್ ಕಾರ್ಡ್ (Credit Card) ಮಾಹಿತಿ ಕೇಳುವುದು ಸಾಮಾನ್ಯವಾಗಿದೆ.
ಕೆಲವೊಮ್ಮೆ ವಂಚಕರು ಹೊರಗಿನವರಾಗಿರಬಹುದು ಅಥವಾ bank ಸಿಬ್ಬಂದಿಯೇ ಆಗಬಹುದು ನೀವು ಸುರಕ್ಷಿತವಾಗಿರಲು ಈ ಮಾರ್ಗಗಳನ್ನು ಅನುಸರಿಸಿ.
- ಫೋನ್ ಅಥವಾ ಇಮೇಲ್ ಮೂಲಕ ವ್ಯವಹಾರ ಮಾಡಬೇಡಿ. ಆನ್ಲೈನ್ ವೆಬ್ ಪೋರ್ಟಲ್ ಅಥವಾ ಕಾಲ್ ಸೆಂಟರ್ನಂತಹ ಅಧಿಕೃತ ಬ್ಯಾಂಕಿಂಗ್ ಚಾನಲ್‌ಗಳ ಮೂಲಕ ಮಾತ್ರ ವಹಿವಾಟು ನಡೆಸಿ.
- ಯಾರಾದರೂ ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ಮಾಡುವಂತೆ ನಿಮ್ಮನ್ನು ಸಂಪರ್ಕಿಸಿದರೆ, ನೀವು ಬ್ಯಾಂಕ್ ಕಾಲ್ ಸೆಂಟರ್ ಗೆ ಕರೆ ಮಾಡಿ ಅದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಪ್ರೊಫೈಲ್ ಅಪ್‌ಡೇಟ್ ಅರ್ಹವಾಗಿದೆಯಾ ಎನ್ನುವುದನ್ನು ಬ್ಯಾಂಕ್ ಸಿಬ್ಬಂದಿ ಖಚಿತಪಡಿಸುತ್ತಾರೆ.
- ಹೆಚ್ಚಿನ ವಹಿವಾಟು ನಡೆಸುತ್ತಿದ್ದರೆ ಮಾತ್ರ ಬ್ಯಾಂಕಿನ ಮೊಬೈಲ್ ಆಪ್ (mobile app) ಅನ್ನು ಇಟ್ಟುಕೊಳ್ಳಿ. ಹೆಚ್ಚಾಗಿ online ಲಾಗ್ ಇನ್ ಆಗಿ ವ್ಯವಹಾರಗಳನ್ನು ಮಾಡಿ. ಇದು ಒಂದೆರಡು ನಿಮಿಷ ಹೆಚ್ಚಿನ ಸಮಯ ತೆಗೆದುಕೊಂಡರು, ಹೆಚ್ಚು ಸುರಕ್ಷಿತವಾಗಿದೆ.
- ಖಾಲಿ ಫಾರ್ಮ್‌ಗಳಿಗೆ ಎಂದಿಗೂ ಸಹಿ ಮಾಡಬೇಡಿ. ಗ್ರಾಹಕರು ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕು ಮತ್ತು ಸಹಿ ಮಾಡುವ ಮೊದಲು ಎಲ್ಲಾ ಫಾರ್ಮ್‌ಗಳನ್ನು ಸ್ವತಃ ಭರ್ತಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು.