Bengaluru: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಸೇವೆಯನ್ನು (Metro rail services) ವಿಸ್ತರಿಸಿದೆ.
ಬೆಂಗಳೂರುದಲ್ಲಿನ ಎಲ್ಲಾ 4 ಮೆಟ್ರೋ ಟರ್ಮಿನಲ್ ಗಳಿಂದ (Whitefield, ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದಾವರ) ಕೊನೆಯ ಮೆಟ್ರೋ ರೈಲು ಸೇವೆ ಮುಂಜಾನೆ 12:30 ರವರೆಗೆ ಲಭ್ಯವಿರಲಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)ನಿಂದ 4 ಟರ್ಮಿನಲ್ ಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 1:15 ಕ್ಕೆ ಹೊರಡುವುದಾಗಿ BMRCL ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.