Gowribidanur : ಗೌರಿಬಿದನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಡೆಂಗಿ ಜಾಗೃತಿ ಜಾಥಾ (Dengue Awareness Rally) ನಡೆಸಲಾಯಿತು. ಚಿಕ್ಕಕುರಗೋಡು, ದೊಡ್ಡಕುರುಗೋಡು, ಹುದುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗಿ ಜ್ವರ ಹರಡದಂತೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ ಮಾತನಾಡಿ “ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಡೆಂಗಿ ಜ್ವರದ ಬಗ್ಗೆ ಅರಿವು ಮೂಡಿಸಲು ಸಭೆ ನಡೆಸಲಾಗಿದ್ದು ಪ್ರತಿ ಶುಕ್ರವಾರ ಒಣಗಲು ದಿನ ಕೈಗೊಳ್ಳಬೇಕು” ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಉಪ ನಿರ್ದೇಶಕ ಕರಿಯಪ್ಪ, ಚಂದ್ರಮೋಹನ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಡೆಂಗಿ ಜಾಗೃತಿ ಜಾಥಾ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.