ಪಂಜಾಬಿನ (Punjab) ಅಮೃತಸರ (Amritsar) ಇಸ್ಲಾಮಾಬಾದ್ ಪೊಲೀಸ್ ಠಾಣೆ ಬಳಿ ಇಂದು ಮುಂಜಾನೆ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ. ಬೆಳಗಿನ 3 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಆ ಭಾಗದ ಜನರು ಭಯಭೀತರಾಗಿದ್ದಾರೆ. ಇಸ್ಲಾಮಾಬಾದ್ ಠಾಣಾಧಿಕಾರಿ ಜಸ್ಬೀರ್ ಸಿಂಗ್ ಅವರ ಮಾತುಗಳ ಪ್ರಕಾರ, ಪೊಲೀಸ್ ಠಾಣೆ ಒಳಗೆ ಯಾವುದೇ ಸ್ಫೋಟ ಸಂಭವಿಸಿಲ್ಲ, ಆದರೆ ಸದ್ದು ಮಾತ್ರ ಕೇಳಿಬಂದಿದೆ.
ಗ್ಯಾಂಗ್‌ಸ್ಟರ್ ಜೀವನ್ ಫೌಜಿ ಈ ಸ್ಫೋಟದ ಹೊಣೆ ಹೊತ್ತಿದ್ದಾನೆ. ಸ್ಥಳೀಯರು 3 ಗಂಟೆ ಸುಮಾರಿಗೆ ಸ್ಫೋಟವಾದರೆಂದು ಹೇಳಿದ್ದು, ಸ್ಫೋಟದ ರಭಸಕ್ಕೆ ಮನೆ ಗೋಡೆಯ ಮೇಲಿದ್ದ ಫೋಟೊ ಕೆಳಗೆ ಬಿದ್ದಿದೆ. ಈ ಹಿಂದೆ ಬುಧವಾರ ರಾತ್ರಿ ಮಜಿತಾ ಪೊಲೀಸ್ ಠಾಣೆಯೊಳಗೆ ಸ್ಫೋಟ ನಡೆದಿತ್ತು.
ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆಯ ಕಿಟಕಿಯ ಗಾಜುಗಳು ಒಡೆದಿವೆ. ಈ ಘಟನೆಯ ನಂತರ, ಪ್ರದೇಶದಲ್ಲಿ ಭೀತಿ ವಾತಾವರಣ ನಿರ್ಮಾಣವಾಯಿತು. ಪೊಲೀಸ್ ಠಾಣೆಯ ಗೇಟ್ ಬಳಿ ತೆರೆದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ, ಅಂದು ಗೇಟುಗಳು ಮುಚ್ಚಲಾಯಿತು.
ಪೊಲೀಸರು ಹೇಳುವಂತೆ, “ಈತನಕ ಆರೋಪಿಗಳ ಮೇಲೆ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 10 ಜನರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ.” ಖಲಿಸ್ತಾನಿ ಭಯೋತ್ಪಾದಕರು 1984ರಲ್ಲಿ ಬಳಸಿದ ‘ಡೆಡ್ ಡ್ರಾಪ್’ ಮಾದರಿಯನ್ನು ಬಳಸಿಕೊಂಡು ದಾಳಿ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಕೇಂದ್ರ ಭದ್ರತಾ ಏಜೆನ್ಸಿಗಳು ಅಲರ್ಟ್ ಆಗಿವೆ.