
ಪಂಜಾಬ್ ಹೈಕೋರ್ಟ್, (High Court) ನಾಲ್ಕು ವರ್ಷಗಳ ಹಿಂದೆ (2021) ಮೃತಪಟ್ಟ ನಿವೃತ್ತ ಸಿವಿಲ್ ನ್ಯಾಯಾಧೀಶರ ಪತ್ನಿಗೆ ಪಿಂಚಣಿ ಮತ್ತು ನಿವೃತ್ತಿ ಲಾಭಗಳ ಪಾವತಿ ವಿಳಂಬವಾದ ಕಾರಣ ಸರ್ಕಾರಕ್ಕೆ ತಾನು ದಂಡ ವಿಧಿಸಿಕೊಂಡಿದೆ.
ನ್ಯಾಯಮೂರ್ತಿಗಳಾದ ಶೀಲ್ ನಾಗು ಮತ್ತು ಸುಧೀರ್ ಸಿಂಗ್ ಅವರಿದ್ದ ಪೀಠ, ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್ ಆಡಳಿತ ವಿಭಾಗವನ್ನು ತರಾಟೆಗೆ ತೆಗೆದುಕೊಂಡು ₹25,000 ದಂಡ ವಿಧಿಸಿದೆ.
ನಿಯಮಿತ ಪಿಂಚಣಿ ಮತ್ತು ಕುಟುಂಬ ಪಿಂಚಣಿಯೊಂದಿಗೆ ಬಡ್ಡಿಯನ್ನು ಸೇರಿಸಿ ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, ಗ್ರಾಚ್ಯುಟಿ (gratuity) ಮೊತ್ತಕ್ಕೂ ಬಡ್ಡಿ ಪಾವತಿಸಲು ಆದೇಶಿಸಿದೆ.