IND VS AUS 3RD TEST: ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy) ಮೂರನೇ ಟೆಸ್ಟ್ ಪಂದ್ಯವು ಗಾಬಾ ಮೈದಾನದಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾ ಟೀಮ್ ಇಂಡಿಯಾ (Team India) ವಿರುದ್ಧದ ಫಾಲೋ ಆನ್ ಗುರಿಯೊಂದಿಗೆ ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ.
ನಾಲ್ಕನೇ ದಿನದಂದು ಮಳೆಯ ನಡುವೆಯೇ ಆಸ್ಟ್ರೇಲಿಯಾ ಬೌಲರ್‌ಗಳು 3 ವಿಕೆಟ್ ಉರುಳಿಸಿದರು. ಭಾರತ ತಂಡ 62.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿದೆ. ಆರಂಭದಲ್ಲಿ 74 ರನ್‌ಗೆ 5 ವಿಕೆಟ್ ಕಳೆದುಕೊಂಡ ತಂಡಕ್ಕೆ ರಾಹುಲ್ ಮತ್ತು ಜಡೇಜಾ ಭರ್ಜರಿ ಬೆಂಬಲ ನೀಡಿದ್ದಾರೆ. ರೋಹಿತ್ ಶರ್ಮಾ (10) ಪ್ಯಾವಿಲಿಯನ್ ಸೇರಿದ ನಂತರ ಬಂದ ಜಡೇಜಾ, ರಾಹುಲ್ ಜೊತೆಗೂಡಿ ತಂಡದ ಸ್ಕೋರ್ ಅನ್ನು ಸುಧಾರಿಸಿದರು.
ಆಸೀಸ್ ಬೌಲರ್‌ಗಳ ದಾಳಿ ಎದುರಿಸಿ ಈ ಇಬ್ಬರೂ ಅರ್ಧಶತಕ ಪೂರೈಸಿದರು. ಆದರೆ 84 ರನ್ ಮಾಡಿದ ರಾಹುಲ್, ನಥಾನ್ ಲಿಯಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಜಡೇಜಾ ಸದ್ಯ 65 ರನ್ ಅಜೇಯವಾಗಿ ಕ್ರೀಸ್ ನಲ್ಲಿದ್ದಾರೆ.
ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಗಾಯದಿಂದ ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿಯೇ ಮೈದಾನ ತೊರೆದರು. ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ಬಳಿಕ ಸ್ನಾಯು ನೋವು ಕಾಣಿಸಿಕೊಂಡ ಕಾರಣ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಅವರ ಎಕ್ಸ್ ಹ್ಯಾಂಡಲ್ ಮೂಲಕ ಹೇಜಲ್ವುಡ್ ಗಾಯದ ಬಗ್ಗೆ ಮಾಹಿತಿ ನೀಡಿದ್ದು, ಅವರು ಕಾಲಿನ ಸ್ನಾಯು ನೋವಿನಿಂದ ಬಳಲುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಗಾಯದ ತೀವ್ರತೆ ನಿರ್ಧರಿಸಿದ ಬಳಿಕ ಅವರು ಮುಂದಿನ ಪಂದ್ಯದಲ್ಲಿ ಆಡುತ್ತಾರೆಯೇ ಎಂಬ ನಿರ್ಧಾರ ಕೈಗೊಳ್ಳಲಾಗುತ್ತದೆ.
ಪರ್ತ್‌ನಲ್ಲಿ ಮೊದಲ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಹೇಜಲ್ವುಡ್, ಗಾಯದ ಕಾರಣದಿಂದ ಅಡಿಲೇಡ್ ಟೆಸ್ಟ್ ಆಟದಿಂದ ಹೊರಗುಳಿಯಿದ್ದರು. ಗಬ್ಬಾ ಟೆಸ್ಟ್‌ನಲ್ಲಿ ಮರಳಿದ ಅವರು ಮತ್ತೆ ಗಾಯಕ್ಕೆ ತುತ್ತಾಗಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟ ತಂದಿದೆ.