ಸಾಮಾನ್ಯವಾಗಿ ನಾವು ಕೈಗಳಿಂದ ಆಹಾರ (eating with hands) ಸೇವಿಸುತ್ತಿದ್ದೇವೆ. ಆದರೆ ಚಮಚಗಳು (spoon) ಕಾಣಿಸಿಕೊಂಡ ನಂತರ ಈ ಪದ್ಧತಿ ಕಡಿಮೆಯಾಗಿದೆ. ಮನಸ್ಸಿನಲ್ಲಿ ಕೈಗಳಿಂದ ತಿನ್ನಬೇಕು ಎಂಬ ಮನಸ್ಸಿದ್ದರೂ ಬೇರೆಯವರು ಏನೆಂದುಕೊಳ್ಳುತ್ತಾರೋ ಏನೋ ಎಂಬ ಭಾವನೆಯಿಂದ ಚಮಚ ಬಳಸುವವರು ಕೂಡ ಇದ್ದಾರೆ.
ಆದರೂ ಇತ್ತೀಚಿನ ಸಂಶೋಧನೆಗಳು ಕೈಗಳಿಂದ ತಿನ್ನುವ ಹಳೆಯ ಸಂಪ್ರದಾಯವು ಅನೇಕ ಆರೋಗ್ಯ ಲಾಭಗಳನ್ನು ಹೊಂದಿದೆ ಎಂದು ಸೂಚಿಸುತ್ತವೆ.
ಆಯುರ್ವೇದದ ಪ್ರಕಾರ ಲಾಭಗಳು
- ಕೈಗಳಿಂದ ತಿನ್ನುವುದರಿಂದ ಜೀರ್ಣಶಕ್ತಿ ಸುಧಾರಿಸುತ್ತದೆ.
- ಬೆರಳುಗಳಿಂದ ಆಹಾರ ಸ್ಪರ್ಶಿಸುವ ಮೂಲಕ ಮೆದುಳಿಗೆ ತಿನ್ನುವ ಪ್ರಕ್ರಿಯೆ ಪ್ರಾರಂಭವಾಗಿದೆಯೆಂದು ಸಂದೇಶ ಸಿಗುತ್ತದೆ, ಇದರಿಂದ ಹೊಟ್ಟೆ ಕಾರ್ಯಕ್ಷಮವಾಗುತ್ತದೆ.
- ಕೈಗಳಿಂದ ತಿನ್ನುವ ಪ್ರಕ್ರಿಯೆ ನಮ್ಮನ್ನು ಯಾವುದು, ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ಜಾಗೃತರಾಗಿರಿಸುತ್ತದೆ.
ವೈಜ್ಞಾನಿಕ ಲಾಭಗಳು
- ರಕ್ತ ಪರಿವಹಣ: ಬೆರಳು ಮತ್ತು ಸ್ನಾಯುಗಳು ಚಲನೆ ಹೊಂದುವುದರಿಂದ ರಕ್ತ ಸಂಚಲನ ಸುಧಾರಿಸುತ್ತದೆ.
- ರೋಗ ನಿರೋಧಕ ಶಕ್ತಿ: ಕೈಗಳಲ್ಲಿ ಕೆಲವು ಉತ್ತಮ ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯವನ್ನು ರಕ್ಷಿಸುತ್ತವೆ.
- ಬ್ಲಡ್ ಶುಗರ್ ನಿಯಂತ್ರಣ: ಆಹಾರದ ಗ್ಲೈಸೆಮಿಕ್ (glycemic) ಸೂಚ್ಯಂಕವು ಸಮತೋಲನದಲ್ಲಿರುತ್ತದೆ, ಬ್ಲಡ್ ಶುಗರ್ ಮಟ್ಟ ಹಿತವಾಗಿರುತ್ತದೆ.
- ತೃಪ್ತಿ ಮತ್ತು ಆಸ್ವಾದನೆ: ಕೈಗಳಿಂದ ತಿನ್ನುವುದರಿಂದ ಮಾನಸಿಕ ತೃಪ್ತಿ ಹೆಚ್ಚುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಹೀಗಾಗಿ, ಹಳೆಯ ಪದ್ಧತಿ ಮಾತ್ರವಲ್ಲ, ಆಹಾರ ಸೇವನೆಯ ಪದ್ದತಿಗೆ ಸಂಬಂಧಿಸಿದಂತೆ ಕೈಗಳಿಂದ ತಿನ್ನುವ ಅಭ್ಯಾಸ ಮಾನಸಿಕ ತೃಪ್ತಿ ಸಿಗಲಿದೆ ಎಂಬುದನ್ನ ಹಲವು ಸಂಶೋಧನೆಗಳು ತಿಳಿಸಿವೆ.ಎಂದು ಹೇಳಬಹುದು.