back to top
22.5 C
Bengaluru
Wednesday, September 17, 2025
HomeEnvironmentಮುಂದಿನ 3 ದಿನ Karnataka ದ 19 ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಮುಂದಿನ 3 ದಿನ Karnataka ದ 19 ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

- Advertisement -
- Advertisement -

Bengaluru: ಕರ್ನಾಟಕದ (Karnataka) ಹವಾಮಾನ ಇಲಾಖೆ (Heavy rains) ತೀವ್ರ ಮಳೆಯ ಮುನ್ಸೂಚನೆ ನೀಡಿದ್ದು, ಮುಂದಿನ 3 ದಿನಗಳಲ್ಲಿ 19 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬೀಳುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಕರಾವಳಿ, ಮಲೆನಾಡು ಹಾಗೂ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಕಾಣಿಸಿಕೊಂಡಿದೆ.

ಆರೆಂಜ್ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಕೊಪ್ಪಳ, ಹಾಸನ, ಕೊಡಗು.

ಯೆಲ್ಲೋ ಅಲರ್ಟ್: ವಿಜಯನಗರ, ರಾಮನಗರ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ.

ಮಳೆಯಾದ ಸ್ಥಳಗಳು: ಮಧುಗಿರಿ, ನಾಯಕನಹಟ್ಟಿ, ನಾಗಮಂಗಲ, ಬರಗೂರು, ರಾಮನಗರ, ಗುಂಡ್ಲುಪೇಟೆ, ಗುಬ್ಬಿ, ಚಿತ್ರದುರ್ಗ, ಮದ್ದೂರು, ಕುಣಿಗಲ್, ನಂಜನಗೂಡು, ತಿಪಟೂರು, ಕೃಷ್ಣರಾಜಸಾಗರ, ಬಂಡೀಪುರ, ಟಿ.ಜಿ.ಹಳ್ಳಿ, ಸರಗೂರು, ಮಿಡಿಗೇಶಿ, ಕುಂದಗೋಳ, ಗೌರಿಬಿದನೂರು, ಚಿಂತಾಮಣಿ, ಬನವಾಸಿ, ಅಜ್ಜಂಪುರ ಮತ್ತಿತರ ಸ್ಥಳಗಳು.

ಬೆಂಗಳೂರು ನಗರ: ಮಂಗಳವಾರದಂದು ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಉಷ್ಣಾಂಶ ಈ ರೀತಿ ದಾಖಲಾಗಿದೆ.

  • HAL: ಗರಿಷ್ಠ 29.6°C, ಕನಿಷ್ಠ 20.4°C
  • ನಗರ ಕೇಂದ್ರ: ಗರಿಷ್ಠ 29.2°C, ಕನಿಷ್ಠ 20.4°C
  • ಕೆಐಎಎಲ್: ಗರಿಷ್ಠ 30.7°C, ಕನಿಷ್ಠ 20.6°C
  • ಜಿಕೆವಿಕೆ: ಗರಿಷ್ಠ 29.0°C, ಕನಿಷ್ಠ 19.8°C
  • ಇತರ ಪ್ರಮುಖ ನಗರಗಳ ಉಷ್ಣಾಂಶ ವಿವರ
  • ಹೊನ್ನಾವರ: 30.0°C / 25.1°C
  • ಕಾರವಾರ: 31.0°C / 26.2°C
  • ಮಂಗಳೂರು ಏರ್ಪೋರ್ಟ್: 29.8°C / 25.0°C
  • ಶಕ್ತಿನಗರ: 30.0°C / 23.8°C
  • ಬೆಳಗಾವಿ ಏರ್ಪೋರ್ಟ್: 29.9°C / 21.2°C
  • ಬೀದರ್: 32.8°C / 22.4°C
  • ವಿಜಯಪುರ: 31.0°C / 23.0°C
  • ಧಾರವಾಡ: 29.8°C / 20.0°C
  • ಗದಗ: 31.6°C / 21.6°C
  • ಕಲಬುರಗಿ: 34.1°C / 24.4°C
  • ಹಾವೇರಿ: 29.2°C / 22.0°C
  • ಕೊಪ್ಪಳ: 31.3°C / 24.3°C
  • ರಾಯಚೂರು: 34.0°C / 24.6°C

ಇನ್ನು ಮುಂದಿನ ದಿನಗಳಲ್ಲಿ ಮಳೆ ಇಂತಹದೇ ಮುಂದುವರಿಯುವ ನಿರೀಕ್ಷೆ ಇದೆ. ರೈತರು, ಪ್ರವಾಸಿಗರು ಮತ್ತು ಸಾರ್ವಜನಿಕರು ಜಾಗರೂಕರಾಗಿರಬೇಕು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page